ಕರ್ನಾಟಕ

karnataka

ETV Bharat / city

ಸ್ವಾತಂತ್ರ್ಯ ದಿನಾಚರಣೆಗೆ ಸನ್ನಡತೆ ಆಧಾರದಲ್ಲಿ ರಿಲೀಸ್ ಆಗ್ತಾರಾ ಕೈದಿಗಳು? - ಬೆಂಗಳೂರು ಕಾರಾಗೃಹ

ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗುತ್ತಿದ್ದ ಕೈದಿಗಳು ಈ ಬಾರಿ ಕೊರೊನಾತಂಕದಿಂದ ಬಿಡುಗಡೆಯಾಗುವುದು ಸಂದೇಹ ಎನ್ನಲಾಗುತ್ತಿದೆ.

central prison
ಕೇಂದ್ರ ಕಾರಾಗೃಹ

By

Published : Aug 6, 2020, 2:23 PM IST

ಬೆಂಗಳೂರು:ಕೊರೊನಾ ಸೋಂಕು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೀತಿಯನ್ನು ನಿರ್ಮಾಣ ಮಾಡಿದೆ. ಹೀಗಾಗಿ‌ ಮುಂಜಾಗ್ರತಾ ಕ್ರಮವಾಗಿ ಕಾರಾಗೃಹಾಧಿಕಾರಿಗಳು‌ ಐದು ಸಾವಿರ ಕೈದಿಗಳ ಪೈಕಿ ಸುಮಾರು 400 ಕೈದಿಗಳನ್ನು ಪ್ರತ್ಯೇಕ ಬ್ಯಾರಕ್​ನಲ್ಲಿಟ್ಟು 300 ಮಂದಿಯ ಸ್ವ್ಯಾ ಬ್ ಟೆಸ್ಟ್ ನಡೆಸಿದ್ದಾರೆ

ಸೋಂಕು ಪರೀಕ್ಷೆ ನಡೆಸಿದವರಲ್ಲಿ 100 ಮಂದಿಗೆ ಕೊರೊನಾ ಪಾಸಿಟಿವ್ ಇರುವ ವಿಚಾರ ಬೆಳಕಿಗೆ ಬಂದಿದೆ. ಜೈಲಿನ ಸಿಬ್ಬಂದಿಯಲ್ಲಿ ಪಾಸಿಟಿವ್ ಬಂದಿರುವ ಕಾರಣ ಕೆಲವರನ್ನು ಐಸೋಲೇಷನ್​ನಲ್ಲಿಟ್ಟು, ಇನ್ನೂ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಾರಿಯ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಜೈಲು‌ಹಕ್ಕಿಗಳಿಗೆ ಬಿಡುಗಡೆ ಭಾಗ್ಯ ಇದೆಯೋ.? ಇಲ್ಲವೋ ಎಂಬ ಪ್ರಶ್ನೆ ಉದ್ಭವಿಸಿದೆ. ಸದ್ಯ ಕೊರೊನಾ ಇರುವ ಕಾರಣ ಜೈಲಿನಲ್ಲಿ ಯಾವುದೇ ಪ್ರಕ್ರಿಯೆ ಶುರುವಾಗಿಲ್ಲ. ಈಗಾಗಲೇ ಕೈದಿಗಳ ನಡತೆ ಆಧಾರದ ಮೇರೆಗೆ ಪಟ್ಟಿ ತಯಾರಿಸಬೇಕಿದ್ದು, ಅದೂ ಸ್ಥಗಿತಗೊಂಡಿದೆ.

ಪ್ರತೀ ವರ್ಷ ಸನ್ನಡತೆ ಆಧಾರದ ಮೇರೆಗೆ ಬಿಡುವ ವ್ಯವಸ್ಥೆಯನ್ನ ಮಾಡಲಾಗುತ್ತದೆ‌.‌ ಪಟ್ಟಿ ತಯಾರಿಸುವ ಮೊದಲು ಹಿರಿಯ ಅಧಿಕಾರಿಗಳು ಬಿಡುಗಡೆಗೊಳ್ಳುವ ಕೈದಿಗಳ ಪ್ರತಿಯೊಂದು ನಡತೆ ಹಾಗೆ ಕೆಲ ವಿಚಾರಗಳನ್ನ ನೋಡಿಕೊಂಡು ಸರ್ಕಾರಕ್ಕೆ ಪಟ್ಟಿ ಕಳುಹಿಸುತ್ತಾರೆ. ಆ ಪಟ್ಟಿ ಕ್ಯಾಬಿನೆಟ್​​ನಲ್ಲಿ ಚರ್ಚೆಯಾಗಿ, ತದನಂತರ ರಾಜ್ಯಪಾಲರ ಅನುಮತಿ ಮೇರೆಗೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಈಟಿವಿ ಭಾರತ್​ಗೆ ಜೈಲಿನ ಮೂಲಗಳ‌‌ ಮಾಹಿತಿ ಬಂದ ಪ್ರಕಾರ ಈ ಬಾರಿ ಕೊರೊನಾ ಇರುವ ಹಿನ್ನೆಲೆ ಸದ್ಯ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ಹಾಗೆಯೇ ಸದ್ಯ ಜಾಮೀನು ಮೇಲೆ ಬಿಡುಗಡೆಯಾದವರನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಆಗಸ್ಟ್ 15ಕ್ಕೆ ಮಾಡುವುದು ಬಹುತೇಕ ಡೌಟ್ ಆಗಿದ್ದು, ಮುಂದಿನ ದಿನಗಳಲ್ಲಿ ಪಟ್ಟಿ ರೆಡಿ ಮಾಡಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ‌ ಎಂದಿದ್ದಾರೆ.

ಹೊಸದಾಗಿ ಬರುವ ಕೈದಿಗಳ ಮೇಲೆ‌ ನಿಗಾ

ಕೊರೊನಾತಂಕದಲ್ಲೇ ಸ್ವಲ್ಪ ಯಾಮಾರಿದ್ರೂ ಜೈಲಿನಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಯಾಕಂದ್ರೆ ಜೈಲಿನಲ್ಲಿ ಕೊರೊನಾ ಸೋಂಕು ಹಬ್ಬಿದೆ. ಹೀಗಾಗಿ ‌ಹೊಸದಾಗಿ ದಾಖಲಾಗುವ ಎಲ್ಲ ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಿ 21 ದಿನಗಳ ಕಾಲ ಪ್ರತ್ಯೇಕ ಇಟ್ಟು , ಕೆಮ್ಮು ನೆಗಡಿ ಹಾಗೂ ಜ್ವರದ ಲಕ್ಷಣಗಳು ಬಂದರೆ ಜೈಲು ಆಸ್ಪತ್ರೆಯಲ್ಲಿ ಟೆಸ್ಟ್​​​​​​ಗೆ ಒಳಪಡಿಸಲಾಗುತ್ತಿದೆ.

ABOUT THE AUTHOR

...view details