ಕರ್ನಾಟಕ

karnataka

ETV Bharat / city

ದೇಶದಲ್ಲಿ ಚುನಾವಣೆ ಅಬ್ಬರ : ಪ್ರಿಂಟಿಂಗ್ ಪ್ರೆಸ್​ನವರ ಬದುಕು ದುರ್ಬರ - undefined

ಕಳೆದ ಹತ್ತು ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್​ಗಳು ನಷ್ಟ ಅನುಭವಿಸುತ್ತಿವೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಪ್ರಿಂಟಿಂಗ್ ಪ್ರೆಸ್​ಗಳಿಗೆ ನಷ್ಟ

By

Published : Apr 12, 2019, 6:09 AM IST

ಬೆಂಗಳೂರು:ದೇಶದೆಲ್ಲೆಡೆ ಲೋಕಸಭೆ ಚುಣಾವಣೆ ಹವಾ ಜೋರಾಗಿದೆ. ಆದರೆ ಚುನಾವಣಾ ಪ್ರಚಾರಕ್ಕಾಗಿ ಪೋಸ್ಟರ್​​, ಟೀ ಶರ್ಟ್, ಟೋಪಿ ಹಾಗೂ ಪಾಂಪ್ಲೆಟ್​ಗಳನ್ನು ತಯಾರಿಸುವ ಪ್ರಿಂಟಿಂಗ್ ಪ್ರೆಸ್​ಗಳು ಮಾತ್ರ ಕಳೆದ ಹತ್ತು ವರ್ಷಗಳಿಂದ ನಷ್ಟ ಅನುಭವಿಸುತ್ತಿವೆ.

ಹತ್ತು ವರ್ಷಗಳ ಹಿಂದೆ ಚುನಾವಣೆ ಬಂತೆಂದರೆ ರಸ್ತೆಗಳಲ್ಲಿ ಬ್ಯಾನರ್​​ಗಳು ರಾರಾಜಿಸುತ್ತಿದ್ದವು. ಇದೀಗ ಕೋರ್ಟ್​ ಆದೇಶದಂತೆ ಬ್ಯಾನರ್​​ಗಳನ್ನು ಬ್ಯಾನ್ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಟೀಶರ್ಟ್ ಹಾಗೂ ಟೋಪಿಗಳನ್ನು ಪಕ್ಷಗಳ ಗುರುತಿನೊಂದಿಗೆ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಇದರಿಂದ ಪ್ರಿಂಟಿಂಗ್ ಪ್ರೆಸ್​ ಮಾಲೀಕರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.

ಪ್ರಿಂಟಿಂಗ್ ಪ್ರೆಸ್​ಗಳಿಗೆ ನಷ್ಟ

ಈ ಬಗ್ಗೆ ಈ ಟಿವಿ ಭಾರತದೊಂದಿಗೆ ಮಾತನಾಡಿದ ಪ್ರಿಂಟಿಂಗ್ ಪ್ರೆಸ್ ​ವ್ಯವಸ್ಥಾಪಕ ರೆಹತ್​ ಉಲ್ಲಾ ಶೇಕ್ , ಹತ್ತು ವರ್ಷಗಳ ಹಿಂದೆ ಪ್ರಿಂಟಿಂಗ್ ಪ್ರೆಸ್​ಗೆ ಸಾಕಷ್ಟು ಡಿಮ್ಯಾಂಡ್ ಇತ್ತು. ಆದರೆ ಈಗ ಎಲ್ಲ ಆರ್ಡರ್​ಗಳು ದೊಡ್ಡ ಪ್ರೆಸ್​ನವರಿಗೆ ಮಾತ್ರ ಹೋಗುತ್ತವೆ. ಒಂದು ವೇಳೆ ನಮ್ಮಂತವರಿಗೆ ಆರ್ಡರ್​ ಕೊಡುವುದೇ ಆದರೆ ರಾಜಕಾರಣಿಗಳು ಕಂಡೀಷನ್​ ಹಾಕುತ್ತಾರೆ. ಒಂದೆರಡು ದಿನಗಳಲ್ಲಿ ಕೆಲಸ ಮುಗಿಯಬೇಕು ಎಂದು ಒತ್ತಾಯ ಮಾಡುತ್ತಾರೆ. ನಮ್ಮಲ್ಲಿರುವ ಕೆಲವೇ ಕೆಲವು ಕೆಲಸಗಾರರು ಹಾಗೂ ಉಪಕರಣಗಳಿಂದ ಇದು ಸಾಧ್ಯವಿಲ್ಲ. ಇದರ ಜೊತೆಗೆ ಆನ್​ಲೈನ್ ವ್ಯವಸ್ಥೆಯಿಂದ ನಮ್ಮ ವ್ಯಾಪಾರ ವಹಿವಾಟು ಸಂಪೂರ್ಣ ದುರ್ಬಲಗೊಂಡಿದೆ ಎಂದು ನೋವು ಹಂಚಿಕೊಂಡರು.

ಐಪಿಎಲ್ ನಡೆಯುವ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ವ್ಯಾಪಾರ ಆಗುತ್ತದೆ. ನಗರದಲ್ಲಿರುವ ಹಳೆಯ ಪ್ರಿಂಟಿಂಗ್ ಪ್ರೆಸ್​ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಆದರೆ ಹೊಸದಾಗಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಲು ಜನ ಹಿಂದೇಟು ಹಾಕುತ್ತಿದ್ದಾರೆ ಎಂದೂ ಹೇಳಿದರು.

For All Latest Updates

TAGGED:

ABOUT THE AUTHOR

...view details