ಕರ್ನಾಟಕ

karnataka

ರಾಜ್ಯಪಾಲರಿಂದ ಪೊಲೀಸರಿಗೆ ರಾಷ್ಟ್ರಪತಿ ಪದಕ ಪ್ರದಾನ; ಆರಕ್ಷಕರ ಸೇವೆ ಶ್ಲಾಘಿಸಿದ ಸಿಎಂ

By

Published : Jan 7, 2021, 6:12 PM IST

ರಾಜ್ಯಪಾಲ ವಜುಭಾಯಿ ವಾಲಾ 2018-19ರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯ ಅಪ್ರತಿಮ ಸೇವೆ ಗುರುತಿಸಿ ರಾಷ್ಟ್ರಪತಿಗಳ ಪದಕ ನೀಡಿ ಗೌರವಿಸಿದರು.

ರಾಷ್ಟ್ರಪತಿ ಪದಕ
ರಾಷ್ಟ್ರಪತಿ ಪದಕ

ಬೆಂಗಳೂರು:ರಾಷ್ಟ್ರದಲ್ಲೇ ಉತ್ತಮ‌ ಪೊಲೀಸ್ ಪಡೆ ಎಂಬ ಹೆಗ್ಗಳಿಕೆಯನ್ನು ನಮ್ಮ ಕರ್ನಾಟಕ ರಾಜ್ಯ ಪಡೆದಿದೆ. ಅತೀ ಸೂಕ್ಷ್ಮ ಪ್ರಕರಣಗಳನ್ನು ಭೇದಿಸಿ ನ್ಯಾಯವನ್ನು ಎತ್ತಿ ಹಿಡಿದ ಮತ್ತು ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರ​ ಕ್ಷಮತೆ ಅದ್ವಿತೀಯವಾದಂತದ್ದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ರಾಜಭವನದಲ್ಲಿ ನಡೆದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ವಿಜೇತರಿಗೆ ಪದಕ ಪ್ರದಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ‌ ಸಿಎಂ, 2018-19 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯ ಅಪ್ರತಿಮ ಸೇವೆಯನ್ನು ಗುರುತಿಸಿ ಪೊಲೀಸರಿಗೆ ರಾಷ್ಟ್ರಪತಿಗಳ ಪದಕ ನೀಡಲಾಗ್ತಿದೆ ಎಂದರು.

ರಾಜ್ಯಪಾಲರಿಂದ ಪದಕ ಪ್ರದಾನ

ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧಗಳನ್ನು ತಡೆಗಟ್ಟಲು ಹಾಗೂ ಅಪರಾಧಿಗಳನ್ನು ಸೆರೆ ಹಿಡಿಯಲು ಹಬ್ಬ ಹರಿದಿನಗಳೆನ್ನದೆ ಸದಾ‌ ಕಾಲ ದಕ್ಷತೆಯಿಂದ ದಣಿವಿಲ್ಲದೆ ಪೊಲೀಸರು ದುಡಿಯುತ್ತಿದ್ದಾರೆ. ನಾಗರೀಕರ ಶಾಂತಿಯುತ ಜೀವನಕ್ಕೆ ಪೋಲಿಸರ ಬಹುದೊಡ್ಡ ಕಾಣಿಕೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಪೊಲೀಸ್ ಪಡೆಯನ್ನು ಆಧುನೀಕರಣಗೊಳಿಸುವ ಮತ್ತು ತಂತ್ರಜ್ಞಾನದ ಬಲದಿಂದ ಇನ್ನಷ್ಟು ಸಬಲ‌ವಾಗಿಸುವ ಇಚ್ಛೆ ಸರ್ಕಾರದ್ದಾಗಿದೆ ಎಂದರು.

ಪೊಲೀಸರ ಜೀವನ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡ್ತಿದೆ. ಎಲ್ಲಾ ಪೊಲೀಸರಿಗೆ ಸೂಕ್ತವಾದಂತಹ ವಸತಿ ವ್ಯವಸ್ಥೆ ಮತ್ತು ಅವರ ಜೀವನ‌ ಮಟ್ಟ ಸುಧಾರಿಸುವ ದಿಶೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಜನವರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಈ ವೇಳೆ 2025ರ ಯೋಜನೆಯಾದ ಪೊಲೀಸ್ ವಸತಿ ಗೃಹದ‌ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಜಯಪುರದಲ್ಲಿ ನಿರ್ಮಾಣಗೊಂಡಿರುವ ಇಂಡಿಯಾ ರಿಸರ್ವ್ ಬೆಟಾಲಿಯನ್ ಆಡಳಿತ ಕಟ್ಟಡದ ಉದ್ಘಾಟನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯಲ್ ಸೇರಿದಂತೆ‌ ಹಲವು ಗಣ್ಯರು ಭಾಗಿಯಾಗಿದ್ದರು.

ABOUT THE AUTHOR

...view details