ಕರ್ನಾಟಕ

karnataka

ETV Bharat / city

ಕೋವಿಡ್​ ಬಿಕ್ಕಟ್ಟು... ಗರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಗಳೇ ಆಪತ್ಬಾಂಧವ - Pregnant womens

ಲಾಕ್​ಡೌನ್​​ ಹೇರಿದ್ದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ನಾನಾ ಕಷ್ಟ ಅನುಭವಿಸಿದ್ದ ಗರ್ಭಿಣಿಯರಿಗಾಗಿ ಈಗ ಕೆಲವು ಸರ್ಕಾರಿ ಆಸ್ಪತ್ರೆಗಳನ್ನು ನಾನ್​ ಕೋವಿಡ್​ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಹೀಗಾಗಿ, ಆ ಆಸ್ಪತ್ರೆಗಳತ್ತ ಬರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ.

Vani vilasa Hospital
ವಾಣಿವಿಲಾಸ ಆಸ್ಪತ್ರೆ

By

Published : Sep 2, 2020, 1:34 PM IST

ಬೆಂಗಳೂರು:ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಕೋವಿಡೇತರ ರೋಗಿಗಳು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅದರಲ್ಲೂ ಗರ್ಭಿಣಿಯರು ಪಾಡು ಯಾರಿಗೂ ಬೇಡ. ಎಷ್ಟೋ ಖಾಸಗಿ ಆಸ್ಪತ್ರೆಗಳು ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯರಿಗೆ ಬೆಡ್​ ಖಾಲಿ ಇಲ್ಲವೆಂದು ವಾಪಸ್​ ಕಳುಹಿಸಿವೆ. ಗರ್ಭಿಣಿಯರು ತಿಂಗಳ ಚೆಕ್​ಅಪ್​​ಗೆ ಸರ್ಕಾರಿ ಆಸ್ಪತ್ರೆಗಳ ಮುಂದೆ ಗಂಟಗಟ್ಟಲೇ ನಿಂತು ಗೋಳಾಟ ಅನುಭವಿಸಿದ್ದರು.

ಇದೀಗ ಹಂತ ಹಂತವಾಗಿ ಅನ್​ಲಾಕ್ ಜಾರಿ ಮಾಡಲಾಗಿದೆ. ಹಾಗೆಯೇ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಟು ಮಾಡಿದ್ದ ಕೆಲವು ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಾನ್​​​​ ಕೋವಿಡ್​ ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದೆ. ಹೀಗಾಗಿ, ಲಾಕ್​ಡೌನ್​ನಲ್ಲಿ ನಾನಾ ತೊಂದರೆ ಅನುಭವಿಸಿದ್ದ ಕೋವಿಡೇತರ ರೋಗಿಗಳು ಮತ್ತು ಗರ್ಭಿಣಿಯರಿಗೆ ಈ ಮೂಲಕ ಅನುಕೂಲವಾಗಿದ್ದು, ವಾಣಿ ವಿಲಾಸ ಆಸ್ಪತ್ರೆಗೆ ಬರುತ್ತಿರುವ ಗರ್ಭಿಣಿಯರ ಸಂಖ್ಯೆ ಕಳೆದ ನಾಲ್ಕು ತಿಂಗಳಿಗೆ ಹೋಲಿಸಿದರೆ ಈಗ ಹೆಚ್ಚಾಗಿದೆ.

ಅನ್ಯ ಜಿಲ್ಲೆ-ರಾಜ್ಯಗಳಿಂದಲೂ ವಾಣಿವಿಲಾಸಕ್ಕೆ ರೋಗಿಗಳ ಆಗಮನ

ನಾನ್ ಕೋವಿಡ್ ಆಸ್ಪತ್ರೆಯಾದ ವಾಣಿವಿಲಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಿರುವ ಕುರಿತು ಈಟಿವಿ ಭಾರತದೊಂದಿಗೆ ಮಾತಾನಾಡಿದ ಆಸ್ಪತ್ರೆ ಆರ್​ಎಂಒ ಡಾ.ಸಂತೋಷ್ ಪ್ರಭಾ, ಮೊದಮೊದಲು ಒಳ-ಹೊರ ರೋಗಿಗಳು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದರು. ಈಗ ಜನರಿಗೆ ಕೋವಿಡ್ ಬಗ್ಗೆ ತಿಳಿದಿದ್ದು, ಅಂಜಿಕೆಯಿಲ್ಲದೆ ಬರುತ್ತಿದ್ದಾರೆ ಎಂದರು.

ವಾಣಿವಿಲಾಸ ಆಸ್ಪತ್ರೆ ಆರ್​ಎಂಒ ಡಾ.ಸಂತೋಷ್ ಪ್ರಭಾ

ಱಪಿಡ್ ಆ್ಯಂಟಿಜೆನ್​​​ನಿಂದಾಗಿ ಕೂಡಲೇ ವರದಿ ಬರುವ ಕಾರಣ ನೆಗಟಿವ್ ಇದ್ದವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಪಾಸಿಟಿವ್ ಬಂದರೆ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಅನ್ಯ ಜಿಲ್ಲೆ-ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಗಂಭೀರ ಸ್ಥಿತಿ ಪ್ರಕರಣಗಳಿಂದ ಹಿಡಿದು ಎಲ್ಲಾ ರೀತಿಯ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಾಣಿವಿಲಾಸ ಆಸ್ಪತ್ರೆಯಲ್ಲಿ ಹೆರಿಗೆಯಾದ ವಿವರ

ತಿಂಗಳು ಹೆರಿಗೆಗಳ ಸಂಖ್ಯೆ
ಮೇ 667
ಜೂನ್ 597
ಜುಲೈ 416
ಆಗಸ್ಟ್ 732
ಒಟ್ಟು 2412

ABOUT THE AUTHOR

...view details