ಕರ್ನಾಟಕ

karnataka

ETV Bharat / city

ಹೆಚ್ಚಿನ ವಿದ್ಯುತ್​ ಉತ್ಪಾದನೆ ಯೋಜನೆಗೆ ರಂಗಕರ್ಮಿ ಪ್ರಸನ್ನ ಕುಮಾರ್ ವಿರೋಧ - ವಿದ್ಯುತ್ ಉತ್ಪಾದನೆಗೆ ಪಶ್ಚಿಮಘಟ್ಟ

ಪಶ್ಚಿಮಘಟ್ಟವನ್ನು ಕೊರೆದು ಸುರಂಗಗಳನ್ನಾಗಿ ಮಾಡಿ ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರವು ಚಾಲನೆ ನೀಡಿದೆ. ಇದು ತಪ್ಪು ಮತ್ತಷ್ಟು ವಿದ್ಯುತ್​ ಉತ್ಪಾದಿಸಿ ಯಾರಿಗೆ ನೀಡಬೇಕು ಎಂದು ಗೊತ್ತಿಲ್ಲ. ಈ ಕಾರ್ಯಕ್ಕೆ ದೇವರು ಕ್ಷಮಿಸುವುದಿಲ್ಲ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಕುಮಾರ್ ಹೇಳಿದ್ದಾರೆ.

Prasanna Kumar's opposition to drilling in the Western Ghats
ಪಶ್ಚಿಮ ಘಟ್ಟಗಳ ಕೊರೆತಕ್ಕೆ ಹಿರಿಯ ರಂಗಕರ್ಮಿ ಪ್ರಸನ್ನ ಕುಮಾರ್ ವಿರೋಧ

By

Published : Jun 12, 2020, 2:02 AM IST

ಬೆಂಗಳೂರು: ಕರ್ನಾಟಕ ಸರ್ಕಾರ ಶರಾವತಿ ನದಿಯಿಂದ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿರುವ ಬಗ್ಗೆ ಪ್ರಕೃತಿಯು ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಕುಮಾರ್ ಹೇಳಿದರು.

ಪಶ್ಚಿಮ ಘಟ್ಟಗಳ ಕೊರೆತಕ್ಕೆ ಹಿರಿಯ ರಂಗಕರ್ಮಿ ಪ್ರಸನ್ನ ಕುಮಾರ್ ವಿರೋಧ

ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಪಶ್ಚಿಮಘಟ್ಟವನ್ನು ಕೊರೆದು ಸುರಂಗಗಳನ್ನಾಗಿ ಮಾಡಿ ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರವು ಚಾಲನೆ ನೀಡಿದೆ. ಇದು ತಪ್ಪು, ಮತ್ತಷ್ಟು ವಿದ್ಯುತ್​ ಉತ್ಪಾದಿಸಿ ಯಾರಿಗೆ ನೀಡಬೇಕು ಎಂಬುದು ಗೊತ್ತಿಲ್ಲ. ಈ ಕಾರ್ಯಕ್ಕೆ ದೇವರು ಕ್ಷಮಿಸುವುದಿಲ್ಲ ಎಂದರು.

ಇನ್ನಾದರೂ ಪ್ರಕೃತಿಯ ಸಿಟ್ಟನ್ನು ಸರ್ಕಾರ ಅರಿತು, ಈ ಯೋಜನೆಯನ್ನು ಕೈ ಬಿಡುತ್ತದೆ ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ABOUT THE AUTHOR

...view details