ಬೆಂಗಳೂರು:ಪವಿತ್ರ ಆರ್ಥಿಕತೆಗೆ ಒತ್ತಾಯಿಸಿ ಅಕ್ಟೋಬರ್ 5ರಿಂದ ಸಾಮಾಜಿಕ ಹೋರಾಟಗಾರ ಹಾಗೂ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹ ಇಂದು ಅಂತ್ಯಗೊಳಿಸಿದ್ದಾರೆ.
ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರ ಹುಟ್ಟುಹಬ್ಬ ಆಚರಿಸಿ ಎಳನೀರು ಸೇವಿಸುವ ಮೂಲಕ ಉಪವಾಸ ಕೈಬಿಟ್ಟರು.

ನಿನ್ನೆ (ಗುರುವಾರ) ಸಂಜೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಕೇಂದ್ರ ಸರ್ಕಾರದ ವರಿಷ್ಠರೊಂದಿಗೆ ಸಭೆ ಕರೆಯುವ ಆಶ್ವಾಸನೆ ನೀಡಿದ್ದರು. ಈ ಕುರಿತು ಗ್ರಾಮ ಸೇವಾ ಸಂಘದ ಸದಸ್ಯರೊಂದಿಗೆ ಚರ್ಚಿಸಿ ಹೋರಾಟದ ಮುಂದಿನ ರೂಪುರೇಷೆಗಳನ್ನು ಸಿದ್ದಪಡಿಸಿದ್ದೇನೆ. ಪ್ರಸ್ತುತ ಉಪವಾಸವನ್ನು ಕೈಬಿಟ್ಟಿದ್ದೇನೆ. ಆದರೆ ಸತ್ಯಾಗ್ರಹವನ್ನು ಸಂಘವು ಮುಂದಿನ ದಿನಗಳಲ್ಲಿ ಚುರುಕುಗೊಳಿಸಲಾಗುವುದು ಎಂದು ಪ್ರಸನ್ನ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಪ್ರಸನ್ನ ಅವರು ದೇಶದ ಗಮನ ಸೆಳೆದಿದ್ದಾರೆ. ಅವರು ಜೀವಕ್ಕೆ ಬೆಲೆ ಕೊಡುವವರಲ್ಲ. ತತ್ವಕ್ಕೆ ಬೆಲೆ ಕೊಡುವವರು. ಕೇಂದ್ರ ಹಾಗೂ ರಾಜ್ಯ ಸಚಿವರು ಬೇರೆಡೆ ಕೊಟ್ಟಂತೆ ಇಲ್ಲಿ ಸುಳ್ಳು ಆಶ್ವಾಸನೆ ಕೊಡಬಾರದು. ತಮ್ಮ ಸ್ವಾರ್ಥಕ್ಕಲ್ಲದೆ ಸಮಾಜಕ್ಕಾಗಿ ಉಪವಾಸ ಕೈಗೊಂಡ ಈ ಸತ್ಯಾಗ್ರಹದ ಬೇಡಿಕೆಯನ್ನು ತಿಂಗಳಲ್ಲ, ವಾರದೊಳಗೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ವೈಎಸ್ವಿ ದತ್ತಾ ಮಾತನಾಡಿ, ಉಪವಾಸ ಕುಳಿತು ನಾಲ್ಕು ದಿನಗಳಾದರೂ ಸರ್ಕಾರಿ ವೈದ್ಯರು ಪ್ರಸನ್ನ ಅವರ ಬಿಪಿ, ಶುಗರ್ ಪರೀಕ್ಷಿಸಲು ಬಂದಿಲ್ಲ. ಇದು ರಾಜ್ಯ ಸರ್ಕಾರದ ನಡೆಯನ್ನು ತೋರಿಸುತ್ತದೆ ಎಂದರು.