ಬೆಂಗಳೂರು:ಕೆ.ಆರ್.ಪುರಂನ ಹಳೇ ಮದ್ರಾಸ್ ರಸ್ತೆಯಲ್ಲಿ ಕಿಲೋ ಮೀಟರ್ ಗಟ್ಟಲೆ ಪಿಪಿಇ ಕಿಟ್ಗಳು ಬಿದ್ದಿದ್ದು, ವಾಹನ ಸವಾರರು ಆತಂಕದಲ್ಲಿ ಸಂಚರಿಸುತ್ತಿದ್ದಾರೆ.
ರಸ್ತೆ ತುಂಬ ಬೇಕಾಬಿಟ್ಟಿಯಾಗಿ ಬಿದ್ದಿರುವ ಪಿಪಿಇ ಕಿಟ್ಗಳು... ಸಾರ್ವಜನಿಕರಲ್ಲಿ ಆತಂಕ! - KR Puram Old Madras Road
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಬೆಂಗಳೂರಿನ ಕೆ.ಆರ್.ಪುರಂನ ಹಳೇ ಮದ್ರಾಸ್ ರಸ್ತೆಯಲ್ಲಿ ಕಸದ ಮೂಟೆಯಲ್ಲಿದ್ದ ಪಿಪಿಇ ಕಿಟ್ಗಳು ಗಾಳಿ-ಮಳೆಗೆ ರಸ್ತೆ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ವಾಹನ ಸವಾರರು ಆತಂಕದಲ್ಲಿ ಸಂಚರಿಸುತ್ತಿದ್ದಾರೆ.
![ರಸ್ತೆ ತುಂಬ ಬೇಕಾಬಿಟ್ಟಿಯಾಗಿ ಬಿದ್ದಿರುವ ಪಿಪಿಇ ಕಿಟ್ಗಳು... ಸಾರ್ವಜನಿಕರಲ್ಲಿ ಆತಂಕ! PPE kits lying across the road.](https://etvbharatimages.akamaized.net/etvbharat/prod-images/768-512-7976182-1052-7976182-1594397526195.jpg)
ರಸ್ತೆ ತುಂಬೆಲ್ಲಾ ಬೇಕಾಬಿಟ್ಟಿಯಾಗಿ ಬಿದ್ದಿರುವ ಪಿಪಿಇ ಕಿಟ್ಗಳು..ಸಾರ್ವಜನಿಕರಲ್ಲಿ ಆತಂಕ
ರಸ್ತೆ ತುಂಬೆಲ್ಲಾ ಬೇಕಾಬಿಟ್ಟಿಯಾಗಿ ಬಿದ್ದಿರುವ ಪಿಪಿಇ ಕಿಟ್ಗಳು..ಸಾರ್ವಜನಿಕರಲ್ಲಿ ಆತಂಕ
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕಸದ ಮೂಟೆಯಲ್ಲಿದ್ದ ಪಿಪಿಇ ಕಿಟ್ಗಳು ಗಾಳಿ-ಮಳೆಗೆ ರಸ್ತೆ ತುಂಬ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ಬಗ್ಗೆ ಪಾಲಿಕೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಿಪಿಇ ಕಿಟ್ ಬಳಸಿ ಎಲ್ಲೆಂದರಲ್ಲಿ ಬಿಸಾಡಿದ್ದು, ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ಶುರುವಾಗಿದೆ.
ದಿನನಿತ್ಯ ಸಾವಿರಾರು ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡುತ್ತಿದ್ದು, ಅವ್ಯವಸ್ಥೆ ಕಂಡು ಆತಂಕ ವ್ಯಕ್ತಪಡಿಸಿದ್ದಾರೆ.