ಕರ್ನಾಟಕ

karnataka

ETV Bharat / city

ಸಂಕಷ್ಟದ ಸ್ಥಿತಿಯಲ್ಲೂ ಗೋಲ್​ಮಾಲ್​... ಕೋಟ್ಯಂತರ ರೂಪಾಯಿ ಮೌಲ್ಯದ ಪಿಪಿಇ ಕಿಟ್ ಮರಳಿ ಗೋಡೌನ್​ಗೆ! - ಪಿಪಿಇ ಕಿಟ್​

ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಪಿಪಿಇ ಕಿಟ್​​​​ಗಳನ್ನು ಪೂರೈಸಿದ್ದ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ppe-kit-worth-crores-of-rupees
ಪಿಪಿಇ ಕಿಟ್

By

Published : Apr 24, 2020, 4:02 PM IST

ಬೆಂಗಳೂರು:ಕಳಪೆ ಗುಣಮಟ್ಟದ ಪಿಪಿಇ ಕಿಟ್​​​ಗಳನ್ನು ಪೂರೈಸಿದ್ದ ಕಂಪನಿ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಹೀಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಪಿಪಿಇ ಕಿಟ್​​​ಗಳು ಈಗ ಮೂಲೆ ಸೇರಲಿವೆ.

ಈವರೆಗೂ ಕಳಪೆ ಕಿಟ್ ಬಳಸಿದ್ದ ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಆತಂಕ ಹೆಚ್ಚಿದೆ. ‌ಏಕೆಂದರೆ, ದಿನೆದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ಕಿಟ್​​ಗಳನ್ನು ಪೂರೈಕೆಯಾಗಿವೆ. ನಮ್ಮ‌ ಬಳಿ ಅಗತ್ಯಕ್ಕಿಂತ ಹೆಚ್ಚು ಪಿಪಿಇ ಕಿಟ್​ಗಳಿದ್ದರೂ ಪ್ರಯೋಜನ ಇಲ್ಲವಾಗಿದೆ ಎಂದು ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್

ಆದರೆ, ತುರ್ತು ಸಂದರ್ಭದಲ್ಲಿ ಟೆಂಡರ್ ಇಲ್ಲದೇ ದೋಷಪೂರಿತ ಪಿಪಿಇ ಕಿಟ್​​​ಗಳನ್ನು ಪಡೆಯಲಾಗಿದೆ. ಮಹಾರಾಷ್ಟ್ರ ಮೂಲದ ಸಂಸ್ಥೆಯಿಂದ ಸರ್ಕಾರ ಖರೀದಿಸಿದ್ದ ಪಿಪಿಇ ಕಿಟ್ ಸರಿಯಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಒಟ್ಟು 7-10 ಸಂಸ್ಥೆಗಳಿಂದ ಈ ಕಿಟ್​ಗಳನ್ನು ರಾಜ್ಯ ಸರ್ಕಾರ ಪಡೆದಿತ್ತು. ಅದರಲ್ಲಿ ಪ್ಲಾಸ್ಟಿಕ್ ಸರ್ಜ್ ಸಂಸ್ಥೆಗೆ‌ ₹22 ಕೋಟಿ ರೂಪಾಯಿ ಆರ್ಡರ್ ನೀಡಲಾಗಿತ್ತು.

ಆರೋಗ್ಯ ಇಲಾಖೆ ಪ್ರಕಟಣೆ

3 ಲಕ್ಷ ಪಿಪಿಇ ಕಿಟ್ ಪೂರೈಸಲು ವರ್ಕ್ ಆರ್ಡರ್ ನೀಡಲಾಗಿತ್ತು. ಅದರಲ್ಲಿ 1.5 ಲಕ್ಷ ಕಿಟ್​​ಗಳನ್ನು ಸಂಸ್ಥೆ ಕಳುಹಿಸಿದೆ. ಅದನ್ನು ಬೇರೆ ಜಿಲ್ಲೆಗಳಿಗೆ ರವಾನಿಸಲಾಗಿದೆ. ಆದರೆ, ಇವುಗಳ ಗುಣಮಟ್ಟ ಕಳಪೆ ಎಂದು ತಿಳಿದಿದ್ದೇ ಎಲ್ಲಾ ಕಿಟ್​​​ಗಳನ್ನು ಮರಳಿಸುವಂತೆ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ ತಿಳಿಸಿದೆ.

ಅತ್ಯಂತ ತುರ್ತಾಗಿ ಬೇಕಾಗಿರುವ ಕಿಟ್​​​ಗಳನ್ನು ಹೊರತುಪಡಿಸಿ ಪ್ಲಾಸ್ಟಿಕ್ ಸರ್ಜ್ ಸಂಸ್ಥೆಯ ಎಲ್ಲಾ ಕಿಟ್​​​ಗಳನ್ನು ಮರಳಿಸಲಾಗಿದೆ. ಸಂಕಷ್ಟದ ಸಂದರ್ಭದಲ್ಲೂ ಗೋಲ್​​ಮಾಲ್ ಮಾಡಿದ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೆಎಸ್ಎಲ್​​ಡಿಎಸ್ ಸಜ್ಜಾಗಿದೆ.

ABOUT THE AUTHOR

...view details