ಬೆಂಗಳೂರು: ಭೀಕರ ಪ್ರವಾಹಕ್ಕೆ ತತ್ತರಿಸಿರುವ ಉತ್ತರದ ಕರ್ನಾಟಕದ ಜನರ ನೆರವಿಗೆ ಕನ್ನಡ ಚಿತ್ರರಂಗದ ಬಹುತೇಕ ನಟರು ನಿಂತಿದ್ದು, ಇದೀಗ ನೊಂದವರ ಕಣ್ಣೀರೊರೆಸಲು ದೊಡ್ಮನೆ ರಾಜಕುಮಾರ ಮುಂದಾಗಿದ್ದಾರೆ.
ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ 'ರಾಜಕುಮಾರ'
ಉತ್ತರದ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಮುಂದಾಗುವಂತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜನರಲ್ಲಿ, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕದ ನೆರವಿಗೆ ನಿಂತ ಪುನೀತ್ ರಾಜ್ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಉತ್ತರ ಕರ್ನಾಟಕದ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಳೆ ಅಪಾರ ಹಾನಿಯುಂಟು ಮಾಡಿದೆ. ಈಗ ನಾವೆಲ್ಲ ಸೇರಿ ಅವರಿಗೆ ಸ್ಪಂದಿಸಬೇಕಿದೆ. ನಾನು ಹಾಗೂ ನನ್ನ ಸಂಸ್ಥೆ ನಮ್ಮ ಕೈಲಾದಷ್ಟು ಕೆಲಸ ಮಾಡ್ತಿದ್ದೀವಿ. ಅದೇ ರೀತಿ ನೀವೂ ಸಹ ನಿಮ್ಮ ಸುತ್ತಮುತ್ತ ಇರುವಂತಹ ಸೇವಾಕೇಂದ್ರಗಳಿಗೆ ಹೋಗಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಅಪ್ಪು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.