ಬೆಂಗಳೂರು: ಕೋವಿಡ್ನಿಂದ ಏಳು ತಿಂಗಳು ಮುಂದೂಡಲ್ಪಟ್ಟಿದ್ದ ವಿದ್ಯುತ್ ದರ ಏರಿಕೆ ನಿರ್ಧಾರ ಉಪ ಚುನಾವಣೆ ಮುಗಿದ ಬೆನ್ನಲ್ಲೇ ಹೊರಬಿದ್ದಿದೆ. ನವೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಪ್ರತಿ ಯೂನಿಟ್ಗೆ ಸರಾಸರಿ 40 ಪೈಸೆ ಹೆಚ್ಚಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಾಯಳ್ ಮೀನ ಅವರು ವಿಡಿಯೋ ಸಂವಾದ ನಡೆಸಿ, ಬೆಲೆ ಏರಿಕೆ ನಿರ್ಧಾರ ಪ್ರಕಟಿಸಿದ್ದರು.
ವಿದ್ಯುತ್ ದರ ಏರಿಕೆ... ಬೆಂಗಳೂರು ಜನರಿಂದ ಆಕ್ರೋಶ
5 ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್ಗೆ ಸರಾಸರಿ ಶೇ 17.15 ಹೆಚ್ಚಳಕ್ಕೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಆಯೋಗ ಶೇ 5.40 ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಗೃಹ ಬಳಕೆದಾರರು ಕೈಗಾರಿಕೆ ಸೇರಿ ಎಲ್ಲ ವರ್ಗದವರಿಗೆ ಪ್ರತಿ ಯೂನಿಟ್ಗೆ ಸರಿಸರಿ 40 ಪೈಸೆ ಹೆಚ್ಚಳವಾಗಿದೆ.ಈಟಿವಿ ಭಾರತದ ಜೊತೆ ಶಾರದಾ ಅನ್ನೋ ಅಂಗಡಿ ಮಾಲೀಕರು ಮಾತನಾಡಿ, ಕೋವಿಡ್ ಮತ್ತು ಮಳೆ ಅನಾಹುತ ಸಂಭವಿಸಿ ಈಗಾಗಲೇ ಸಂಕಷ್ಟದಲ್ಲಿದ್ದೇವೆ, ವ್ಯಾಪಾರ ನಷ್ಟದಲ್ಲಿದ್ದು, ಈಗ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಹೋಟೆಲ್ ಉದ್ಯೋಗಿಯಾದ ಉದಯ್ ಅವರು ಮತನಾಡಿ, ಈಗಾಗಲೇ ತಿಂಗಳು ಬಾಡಿಗೆ ಕಟ್ಟುವುದೇ ಕಷ್ಟವಾಗಿದ್ದು, ಸಂಬಳವು ದುಸ್ತರವಾಗಿದೆ. ಮಳೆ ಬಂದು ಬೆಳೆ ನಾಶವಾಗಿದ್ದು, 8 ತಿಂಗಳಿನಿಂದ ವ್ಯಾಪಾರವು ಇಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.