ಕರ್ನಾಟಕ

karnataka

ETV Bharat / city

ಬೆಸ್ಕಾಂ ತುರ್ತು ನಿರ್ವಹಣಾ ಕಾರ್ಯ: ವಿಧಾಸೌಧದ ಸುತ್ತಮುತ್ತಲಿನ ಪ್ರದೇಶಗಲ್ಲಿ ಭಾನುವಾರ ಪವರ್ ಕಟ್ - power cuts in Bengaluru surrounding areas of Vidhana Soudha

ಭಾನುವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್​ ವ್ಯತ್ಯಯ- ಬೆಸ್ಕಾಂ ಮಾಹಿತಿ

power cuts
power cuts

By

Published : Jul 30, 2022, 10:50 PM IST

ಬೆಂಗಳೂರು : ಭಾನುವಾರ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮುಖ್ಯವಾಗಿ ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ನಾಳೆ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ 66/11 ಕೆವಿ ಸ್ಟೇಷನ್ 35.5 ಎಂ.ವಿ.ಎ ಪರಿವರ್ತಕ -2ರಲ್ಲಿ ತುರ್ತು ನಿರ್ವಹಣಾ ಕಾರ್ಯವನ್ನು ನಡೆಸುವುದರಿಂದ ವಿಧಾನಸೌಧ, ಎಂಎಸ್ ಬಿಲ್ಡಿಂಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಿದೆ.

ವಿಧಾಸೌಧ ಸುತ್ತ ಮುತ್ತಲಿನ ಎಲ್.ಹೆಚ್, ಬಿ.ಎಸ್‌.ಎನ್‌.ಎಲ್ ಬಿಲ್ಡಿಂಗ್, ಎಂಎಸ್ ಬಿಲ್ಡಿಂಗ್, ಕಾರ್ಪೋರೇಷನ್ ಕಚೇರಿ, ಕೆಪಿಎಸ್‌ಸಿ, ಸಿಐಡಿ, ಚೀಫ್ ಜಸ್ಟೀಸ್ ಮನೆ, ಮಿಲ್ಲರ್ಸ್ ರಸ್ತೆ, ವಸಂತ ನಗರ, ದಾಬಸ್ ಪೇಟೆ, ಚಿಕ್ ಬಜಾರ್ ರಸ್ತೆ, ಚಾಂದಿನಿ ಚೌಕ್ ರಸ್ತೆ, ಸ್ಲಾಟರ್ ಹೌಸ್ ರಸ್ತೆ, ತಿಮ್ಮಯ್ಯ ರಸ್ತೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ :YouTube ನೋಡಿ ಲಾಕ್​ಡೌನ್​​​ ವೇಳೆ ವಿಮಾನ ನಿರ್ಮಾಣ.. ಕುಟುಂಬದೊಂದಿಗೆ ಕೇರಳಿಗನ ಪ್ರಪಂಚ ಪರ್ಯಟನೆ

ABOUT THE AUTHOR

...view details