ಕರ್ನಾಟಕ

karnataka

ETV Bharat / city

ನಾಳೆ ಖಾತೆ ಹಂಚಿಕೆ ಸಾಧ್ಯತೆ: ಸಂಭಾವ್ಯ ಖಾತೆಗಳು ಇಲ್ಲಿವೆ - ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ

ಒಂದೆರಡು ದಿನಗಳಲ್ಲಿ ಸಚಿವರ ಖಾತೆ ಹಂಚಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ. ಜೊತೆಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳ ಹಂಚಿಕೆ ಸಹ ಮಾಡಲಾಗಿದೆ. ಇದೀಗ ಸಚಿವರು ಖಾತೆ ಹಂಚಿಕೆಯನ್ನೇ ಎದುರು ನೋಡುತ್ತಿದ್ದಾರೆ. ಸಚಿವರು-ಕ್ಷೇತ್ರ-ಸಂಭಾವ್ಯ ಖಾತೆಗಳು ಹೀಗಿವೆ.

potential-portfolio-allotment-of-cabinet
potential-portfolio-allotment-of-cabinet

By

Published : Aug 5, 2021, 9:19 PM IST

Updated : Aug 5, 2021, 10:57 PM IST

ಬೆಂಗಳೂರು:ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಏನೋ ಆಯಿತು. ಆದರೆ, ಇದೀಗ ಹೊಸ ಸಚಿವರ ಖಾತೆ ಹಂಚಿಕೆ ಮಾಡುವುದೇ ದೊಡ್ಡ ಸವಾಲಾಗಿದೆ. ಪ್ರಭಾವಿ ಖಾತೆಗಳ ಮೇಲೆ ಕೆಲ ಸಚಿವರು ಕಣ್ಣಿಟ್ಟಿದ್ದಾರೆ. ಜೊತೆಗೆ ಹಿಂದೆ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಖಾತೆ ನಿರ್ವಹಿಸಿದ್ದ ಕೆಲವು ಮಂದಿ ಅದೇ ಖಾತೆಯನ್ನು ಮುಂದುವರಿಸುವಂತೆ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಖಾತೆ ಹಂಚಿಕೆ ಸವಾಲಾಗಿದೆ.

ಒಂದೆರಡು ದಿನಗಳಲ್ಲಿ ಸಚಿವರ ಖಾತೆ ಹಂಚಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ. ಜೊತೆಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳ ಹಂಚಿಕೆ ಸಹ ಮಾಡಲಾಗಿದೆ. ಇದೀಗ ಸಚಿವರು ಖಾತೆ ಹಂಚಿಕೆಯನ್ನೇ ಎದುರು ನೋಡುತ್ತಿದ್ದಾರೆ.

ಪ್ರಮುಖ ಖಾತೆಗಳಾಗಿರುವ ಗೃಹ, ಇಂಧನ, ಲೋಕೋಪಯೋಗಿ, ಜಲಸಂಪನ್ಮೂಲ, ಸಾರಿಗೆ, ಕಂದಾಯ, ಬೆಂಗಳೂರು ನಗರಾಭಿವೃದ್ಧಿ , ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾತ್‍ ರಾಜ್ ಸೇರಿದಂತೆ ಕೆಲವು ಖಾತೆಗಳ ಮೇಲೆ ಪ್ರಭಾವಿ ಸಚಿವರು ಕಣ್ಣಿಟ್ಟಿದ್ದಾರೆ.

ಯಡಿಯೂರಪ್ಪ ನೇತೃತ್ವದ ಕ್ಯಾಬಿನೆಟ್​ನಲ್ಲಿ ಉಪಮುಖ್ಯಮಂತ್ರಿ ಜೊತೆಗೆ ಲೋಕೋಪಯೋಗಿ ಸಚಿವರಾಗಿದ್ದ ಗೋವಿಂದ ಕಾರಜೋಳ ಪುನಃ ಅದೇ ಖಾತೆ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದಾರೆ. ಬೃಹತ್ ನೀರಾವರಿ ಇಲಾಖೆ ಮೇಲೆ ಕೆ.ಎಸ್. ಈಶ್ವರಪ್ಪ, ಕಂದಾಯ ಇಲಾಖೆ ಮೇಲೆ ಅರಗ ಜ್ಞಾನೇಂದ್ರ ಕಣ್ಣಿಟ್ಟಿದ್ದಾರೆ. ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಅವರು ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದ ಮುರುಗೇಶ್ ನಿರಾಣಿ ಇಂಧನ ಜೊತೆಗೆ ಬೃಹತ್ ನೀರಾವರಿ ಹಾಗೂ ಗ್ರಾಮೀಣ ಅಭಿವೃದ್ಧಿ ಪಂಚಾಯತ್‍ ರಾಜ್ ಇಲಾಖೆ ಮೇಲೆ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಡಾ. ಕೆ. ಸುಧಾಕರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಸಹಕಾರ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಅದೇ ಖಾತೆಯಲ್ಲಿ ಮುಂದುವರಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಸಚಿವರಿಗೆ ಯಾವ, ಯಾವ ಖಾತೆ ಹಂಚಿಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸಚಿವರು-ಕ್ಷೇತ್ರ-ಸಂಭಾವ್ಯ ಖಾತೆಗಳು ಈ ಕೆಳಕಂಡಂತಿವೆ:

1. ಬಸವರಾಜ ಬೊಮ್ಮಾಯಿ - ಹಣಕಾಸು, ಇಂಧನ, ಗುಪ್ತಚರ, ಒಳಾಡಳಿತ, ಜಲಸಂಪನ್ಮೂಲ
2. ಕೆ.ಎಸ್.ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ/ ಕಂದಾಯ
3. ಗೋವಿಂದ ಕಾರಜೋಳ - ಸಮಾಜ ಕಲ್ಯಾಣ/ ಲೋಕೋಪಯೋಗಿ.
4 . ಆರ್.ಅಶೋಕ್ - ಗೃಹ/ಬೆಂಗಳೂರು ನಗರಾಭಿವೃದ್ಧಿ.
5 . ಬಿ.ಶ್ರೀರಾಮುಲು - ಸಮಾಜ ಕಲ್ಯಾಣ
6. ವಿ. ಸೋಮಣ್ಣ - ಕಂದಾಯ / ವಸತಿ
7. ಉಮೇಶ್ ಕತ್ತಿ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.
8. ಎಸ್. ಅಂಗಾರ - ಬಂದರು, ಮೀನುಗಾರಿಕೆ
9. ಜೆ.ಸಿ.ಮಾಧುಸ್ವಾಮಿ - ಕಾನೂನು ಮತ್ತು ಸಂಸದೀಯ/ಸಣ್ಣ ನೀರಾವರಿ
10. ಅರಗ ಜ್ಞಾನೇಂದ್ರ - ಅರಣ್ಯ, ಪರಿಸರ.
11. ಡಾ.ಸಿ.ಎನ್. ಅಶ್ವತ್ಥ ನಾರಾಯಣ - ಉನ್ನತ ಶಿಕ್ಷಣ/ ಐಟಿ-ಬಿಟಿ.
12. ಸಿ.ಸಿ.ಪಾಟೀಲ್ - ಸಣ್ಣ ಕೈಗಾರಿಕೆ/ ಗಣಿ ಮತ್ತು ಭೂ ವಿಜ್ಞಾನ
13. ಆನಂದ್ ಸಿಂಗ್ - ಪ್ರವಾಸೋದ್ಯಮ.
14. ಕೋಟ ಶ್ರೀನಿವಾಸ ಪೂಜಾರಿ - ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ.
15. ಪ್ರಭು ಚವ್ಹಾಣ್ - ಪಶು ಸಂಗೋಪನೆ.
16. ಮುರುಗೇಶ್ ನಿರಾಣಿ - ಬೃಹತ್ ಮತ್ತು ಮಧ್ಯಮ ಕೈಗಾರಿಕಾ
17. ಶಿವರಾಂ ಹೆಬ್ಬಾರ್ - ಕಾರ್ಮಿಕ/ ಸಕ್ಕರೆ
18. ಎಸ್.ಟಿ. ಸೋಮಶೇಖರ್ - ಸಹಕಾರ/ ವಸತಿ
19. ಬಿ.ಸಿ.ಪಾಟೀಲ್ - ಕೃಷಿ/ ಗೃಹ
20. ಬೈರತಿ ಬಸವರಾಜ್ - ನಗರಾಭಿವೃದ್ಧಿ
21. ಡಾ.ಕೆ.ಸುಧಾಕರ್ - ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
22. ಕೆ. ಗೋಪಾಲಯ್ಯ - ಆಹಾರ ಮತ್ತು ನಾಗರಿಕ ಸರಬರಾಜು/ ಅಬಕಾರಿ.
23. ಶಶಿಕಲಾ ಜೊಲ್ಲೆ - ಮಹಿಳಾ ಮತ್ತು ಮಕ್ಕಳ ಕಲ್ಯಾಣ/ ಕನ್ನಡ ಮತ್ತು ಸಂಸ್ಕೃತಿ
24. ಎಂ.ಟಿ.ಬಿ. ನಾಗರಾಜ್ - ವಸತಿ/ಸಾರಿಗೆ.
25. ನಾರಾಯಣ ಗೌಡ - ಸಣ್ಣ ನೀರಾವರಿ.
26. ಬಿ.ಸಿ.ನಾಗೇಶ್ - ಕನ್ನಡ ಮತ್ತು ಸಂಸ್ಕೃತಿ.
27. ಸುನೀಲ್ ಕುಮಾರ್ - ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ.
28. ಹಾಲಪ್ಪ ಆಚಾರ್ - ಜವಳಿ, ವಕ್ಫ್/ ತೋಟಗಾರಿಕೆ.
29. ಶಂಕರ ಪಾಟೀಲ್ ಮುನೇನಕೊಪ್ಪ - ಪೌರಾಡಳಿತ
30. ಮುನಿರತ್ನ - ಯುವಜನ, ಕ್ರೀಡೆ/ ಪ್ರವಾಸೋದ್ಯಮ.

Last Updated : Aug 5, 2021, 10:57 PM IST

ABOUT THE AUTHOR

...view details