ಕರ್ನಾಟಕ

karnataka

By

Published : Jan 6, 2022, 5:35 PM IST

ETV Bharat / city

Weekend curfew: ಪಿಜಿ ಸಿಇಟಿ, ಯುಜಿ ನೀಟ್ ದಾಖಲಾತಿ ಪರಿಶೀಲನೆ ಮುಂದೂಡಿಕೆ

Weekend curfew in Karnataka: ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್​ ಕರ್ಫ್ಯೂ ಸೇರಿದಂತೆ ವಿವಿಧ ನಿರ್ಬಂಧಗಳನ್ನು ಹೇರಲಾಗಿದೆ. ಇದರಿಂದ ಜನವರಿ 8 ರಂದು ನಡೆಯಬೇಕಿದ್ದ ಪಿಜಿ ಸಿಇಟಿ ಹಾಗೂ ಯುಜಿ ನೀಟ್ ದಾಖಲಾತಿ ಪರಿಶೀಲನೆಯನ್ನು ಜನವರಿ 10 ಕ್ಕೆ ಮುಂದೂಡಲಾಗಿದೆ.

verification
ಪರಿಶೀಲನೆ

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್​ ಕರ್ಫ್ಯೂ ಸೇರಿದಂತೆ ವಿವಿಧ ನಿರ್ಬಂಧಗಳನ್ನು ಹೇರಲಾಗಿದೆ. ಹೀಗಾಗಿ ಜನವರಿ 8 ರಂದು ನಡೆಯಬೇಕಿದ್ದ ಪಿಜಿ ಸಿಇಟಿ ಹಾಗೂ ಯುಜಿ ನೀಟ್ ದಾಖಲಾತಿ ಪರಿಶೀಲನೆಯನ್ನು ಜನವರಿ 10 ಕ್ಕೆ ಮುಂದೂಡಲಾಗಿದೆ.

ಇದೇ ಶನಿವಾರದಂದು ಎಂಬಿಎ, ಎಂಸಿಎ, ಎಂಟೆಕ್​ ಕೋರ್ಸ್​ಗಳ ಪಿಜಿಸಿಇಟಿ-2021ರ ದಾಖಲಾತಿ ಪರಿಶೀಲನೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಸರ್ಕಾರ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿದ್ದರಿಂದ ಪಿಜಿ ಸಿಇಟಿ ಅಭ್ಯರ್ಥಿಗಳಿಗೆ ತೊಂದರೆ ಉಂಟಾಗುವ ಕಾರಣ ಎಂಬಿಎ, ಎಂಸಿಎ, ಎಂಟೆಕ್​ ಕೋರ್ಸ್​ಗಳ ಪಿಜಿಸಿಇಟಿ-2021ರ ದಾಖಲಾತಿ ಪರಿಶೀಲನೆಯನ್ನು ಸೋಮವಾರಕ್ಕೆ ಮುಂದೂಡಿ ಕೆಇಎ ಆದೇಶ ಹೊರಡಿಸಿದೆ.

ಇದರಂತೆ ಪಿಜಿ ಸಿಇಟಿ ಅಭ್ಯರ್ಥಿಗಳು ಜ.10 ರಂದು ನಿಗದಿತ ಸಹಾಯಕ ಕೇಂದ್ರಗಳಲ್ಲಿ ಹಾಜರಾಗಲು ಸೂಚಿಸಲಾಗಿದೆ. ಉಳಿದಂತೆ ದಾಖಲಾತಿ ಪರಿಶೀಲನೆಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಯುಜಿ ನೀಟ್ ದಾಖಲಾತಿ ಪರಿಶೀಲನೆಯೂ ಮುಂದೂಡಿಕೆ..

ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಯುಜಿ ನೀಟ್ ದಾಖಲಾತಿ ಪರಿಶೀಲನೆಯ ದಿನಾಂಕವನ್ನು ಮುಂದೂಡಲಾಗಿದೆ.

ಜ.8 ರಂದು ನಿಗದಿಪಡಿಸಿದ್ದ ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್​ಗಳ ಪ್ರವೇಶಾತಿಗೆ ಯುಜಿ ನೀಟ್ ದಾಖಲಾತಿ ಪರಿಶೀಲನೆಯನ್ನು ಜನವರಿ 14ಕ್ಕೆ ಮುಂದೂಡಲಾಗಿದೆ. ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾಗಿದ್ದ ಅಭ್ಯರ್ಥಿಗಳು ಜನವರಿ 14 ರಂದು ಬೆಂಗಳೂರು ಕೇಂದ್ರದಲ್ಲಿ ಹಾಜರಾಗಲು ಸೂಚಿಸಲಾಗಿದೆ. ಉಳಿದಂತೆ ದಾಖಲಾತಿ ಪರಿಶೀಲನೆಯ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:ಕಾಂಗ್ರೆಸ್​ ಪಾದಯಾತ್ರೆಗೆ ಯಾವುದೇ ಅಡ್ಡಿಯಿಲ್ಲ: ಸಚಿವ ಮಾಧುಸ್ವಾಮಿ

For All Latest Updates

TAGGED:

ABOUT THE AUTHOR

...view details