ಕರ್ನಾಟಕ

karnataka

ETV Bharat / city

ಸ್ನಾತಕೋತ್ತರ ಕೋರ್ಸ್ ಜಟಾಪಟಿ: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹೆಚ್‌.ಡಿ.ರೇವಣ್ಣ ಧರಣಿ..? - Postgraduate Course issues HD Revanna try to protest in CM Home Office Krishna

ಹೊಳೆ ನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿಗೆ 2022 - 23ನೇ ಶೈಕ್ಷಣಿಕ ಸಾಲಿಗೆ ಮೈಸೂರು ವಿವಿಯಿಂದ ಹೊಸದಾಗಿ MSc ಸೈಕಾಲಜಿ, ಎಂಎಸ್ಸಿ ಫುಡ್ ಮತ್ತು ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸ್‌ಗಳನ್ನು ಮಂಜೂರು ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಿಫಾರಸು ಮಾಡಿದ್ದಾರೆ. ಇದನ್ನು ಉನ್ನತ ಶಿಕ್ಷಣ ಸಚಿವರು ತಿರಸ್ಕರಿಸಿದ್ದಾರೆ ಎಂದು ಹೆಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Postgraduate Course issues; HD Revanna try to protest in CM Home Office Krishna
ಸ್ನಾತಕೋತ್ತರ ಕೋರ್ಸ್ ಜಟಾಪಟಿ; ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹೆಚ್‌.ಡಿ.ರೇವಣ್ಣ ಧರಣಿ..?

By

Published : Jan 18, 2022, 12:08 PM IST

ಬೆಂಗಳೂರು: ಹೊಳೆನರಸೀಪುರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊಸದಾಗಿ MSc ಸೈಕಾಲಜಿ ಮತ್ತು MSc ಫುಡ್ & ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸ್‌ಗಳನ್ನು ಮಂಜೂರು ಮಾಡುವ ಬೇಡಿಕೆ ನಿರಾಕರಿಸಲಾಗಿದೆ. ಇದನ್ನು ಖಂಡಿಸಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಧರಣಿ ನಡೆಸುವುದಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ರೇವಣ್ಣ, ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿಗೆ 2022-23ನೇ ಶೈಕ್ಷಣಿಕ ಸಾಲಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಹೊಸದಾಗಿ MSc ಸೈಕಾಲಜಿ ಮತ್ತು ಎಂಎಸ್ಸಿ ಫುಡ್ ಮತ್ತು ನ್ಯೂಟ್ರಿಷನ್ ಸೇರಿದಂತೆ 12 ಸ್ನಾತಕೋತ್ತರ ಕೋರ್ಸ್‌ಗಳನ್ನು ಮಂಜೂರು ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ರಾಜಕೀಯ ದುರುದ್ದೇಶದಿಂದ ಶಿಫಾರಸು ತಿರಸ್ಕಾರ

ಮೈಸೂರು ವಿಶ್ವವಿದ್ಯಾಲಯದ ಶಿಫಾರಸನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು MSc ಸೈಕಾಲಜಿ ಮತ್ತು MSc ಫುಡ್ ನ್ಯೂಟ್ರಿಷನ್ ಸೇರಿದಂತೆ 62 ಸ್ನಾತಕೋತ್ತರ ಕೋರ್ಸ್‌ಗಳನ್ನು ಮಂಜೂರು ಮಾಡಲು ಉನ್ನತ ಶಿಕ್ಷಣ ಸಚಿವರಿಗೆ ಶಿಫಾರಸು ಮಾಡಿದ್ದಾರೆ. ಆದರೆ, ಉನ್ನತ ಶಿಕ್ಷಣ ಸಚಿವರು ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ರೇವಣ್ಣ ಆರೋಪಿಸಿದ್ದಾರೆ.

ನನ್ನ ಕ್ಷೇತ್ರದ ಶೈಕ್ಷಣಿಕ ಹಿತದೃಷ್ಟಿಯಿಂದ ಇದನ್ನು ಪ್ರತಿಭಟಿಸುವ ಸಲುವಾಗಿ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದ ಆವರಣದಲ್ಲಿ ಕೊರೊನಾ ನಿಯಮ ಪಾಲಿಸಿ ಏಕಾಂಗಿಯಾಗಿ ಧರಣಿ ನಡೆಸಲು ನಿರ್ಧರಿಸಿದ್ದೇನೆ ಎಂದು ಪ್ರಕಟಿಸಿದ್ದು, ಕೃಷ್ಣಾಗೆ ಆಗಮಿಸಿದ್ದಾರೆ. ಸಿಎಂ ಕಚೇರಿ ಸಿಬ್ಬಂದಿ ಜೊತೆ ಮಾತುಕತೆ ನಡೆಸುತ್ತಿರುವ ಅವರು ಬೇಡಿಕೆ ಈಡೇರದಿದ್ದರೆ ಕೃಷ್ಣಾದಲ್ಲೇ ಧರಣಿ ನಡೆಸಲಿದ್ದಾರೆ.

ಇದನ್ನೂ ಓದಿ:ಮಾತಿಗೆ ಕಟ್ಟುಬಿದ್ದು ಅದರಂತೆ ನಡೆಯುವ ರಾಷ್ಟ್ರದ ಏಕೈಕ ನಾಯಕ ದೇವೇಗೌಡ್ರು: ಹೆಚ್​ ಡಿ ರೇವಣ್ಣ

For All Latest Updates

TAGGED:

ABOUT THE AUTHOR

...view details