ಬೆಂಗಳೂರು: ದೇಸಿ ಪರಂಪರೆಯ ಆಯುರ್ವೇದ ವೈದ್ಯ ಪದ್ದತಿಗೆ ಮನ್ನಣೆ ದೊರಕಿಸಿಕೊಡುವ ಸಲುವಾಗಿ ನೀತಿಯೊಂದನ್ನು ರೂಪಿಸುವಂತೆ ಯು.ಬಿ ವೆಂಕಟೇಶ್ ಖಾಸಗಿ ನಿರ್ಣಯ ಮಂಡಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರ ಖಾಸಗಿ ಕಾರ್ಯಕಲಾಪಗಳ ವೇಳೆ ಖಾಸಗಿ ವಿಧೇಯಕವನ್ನು ಯು.ಬಿ ವೆಂಕಟೇಶ್ ಮಂಡಿಸಿದರು. ಸಚಿವರ ಅನುಪಸ್ಥಿತಿಯಲ್ಲಿ ಖಾಸಗಿ ವಿಧೇಯಕ ಮಂಡಿಸಿದ್ದು, ಇದರ ಮೇಲಿನ ಚರ್ಚೆಯನ್ನು ಮಂಗಳವಾರ ಕೈಗೆತ್ತಿಕೊಳ್ಳುವುದಾಗಿ ಉಪ ಸಭಾಪತಿ ಪ್ರಾಣೇಶ್ ರೂಲಿಂಗ್ ನೀಡಿದರು.
ನಂತರ ಅರ್ಜಿಗಳನ್ನೊಪ್ಪಿಸುವ ಕಲಾಪ ನಡೆಸಲಾಯಿತು. ಮೊದಲಿಗೆ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಕುಂದಾಪುರ ತಾಲ್ಲೂಕಿನ, ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡಾಕೆರೆಗೆ ತುರ್ತಾಗಿ 2 ಕೊಠಡಿಗಳನ್ನು ಮಂಜೂರು ಮಾಡಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಉತ್ತೇಜನ ನೀಡುವ ಬಗ್ಗೆ ಅರ್ಜಿಯನ್ನು ಒಪ್ಪಿಸಿದರು.