ಕರ್ನಾಟಕ

karnataka

ETV Bharat / city

ಹೆಜ್ಜೆ ಹೆಜ್ಜೆಗೂ ಕೊರೊನಾ ಕಾಟ: ಮಾರ್ಚ್ 31ರವರೆಗೂ ಪೊಲೀಸ್​ ತರಬೇತಿ ಸ್ಥಗಿತ - ರಾಜ್ಯ ಪೊಲೀಸ್ ತರಬೇತಿ ಇಲಾಖೆ ಐಜಿಪಿ ಪಿ.ಹರಿಶೇಖರನ್ ಆದೇಶ

ಕೊರೊನಾ ವೈರಸ್ ಭೀತಿ ದಿನೇ ದಿನೆ ಏರತೊಡಗುತ್ತಿರುವ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಮಾ.31ರವರೆಗೂ ತರಬೇತಿಯನ್ನು ರದ್ದುಗೊಳಿಲಾಗಿದೆ.

police training cancel
ರಾಜ್ಯ ಪೊಲೀಸ್ ತರಬೇತಿ ಇಲಾಖೆ

By

Published : Mar 18, 2020, 9:44 PM IST

ಬೆಂಗಳೂರು: ಪೊಲೀಸ್ ತರಬೇತಿಗೂ ಕೊರೊನಾ ಬಿಸಿ ತಟ್ಟಿದೆ. ರಾಜ್ಯದ ವಿವಿಧ ಭಾಗಗಳಲ್ಲಿ‌ ನಡೆಯುತ್ತಿರುವ ತರಬೇತಿಯನ್ನು ಮಾ.31ರವರೆಗೂ ರದ್ದುಗೊಳಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ತರಬೇತಿ ಇಲಾಖೆ ಐಜಿಪಿ ಪಿ.ಹರಿಶೇಖರನ್ ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರತಿ

ರಾಜ್ಯದ ಹಲವು ಭಾಗಗಳಲ್ಲಿ ಪೊಲೀಸ್ ತರಬೇತಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಭೀತಿ ದಿನೇ ದಿನೆ ಏರತೊಡಗುತ್ತಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ತರಬೇತಿಯನ್ನು ಮಾ.31ರವರೆಗೂ ಸ್ಥಗಿತಗೊಳಿಸಲಾಗಿದೆ. ಕೊರೊನಾ ಕುರಿತು ಆರೋಗ್ಯ ಇಲಾಖೆ ಕೈಗೊಳ್ಳುವ ನಿರ್ದೇಶನಗಳನ್ನು ಅನುಸರಿಸುವಂತೆ ಆದೇಶಿಸಿದ್ದಾರೆ.

ABOUT THE AUTHOR

...view details