ಬೆಂಗಳೂರು :ಡಿ.ಜೆ.ಹಳ್ಳಿ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದ ನಟ, ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆ, 7 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
'ನನಗೆ 7 ತಿಂಗಳ ಮಗು ಮತ್ತು 3 ತಿಂಗಳ ಮಗು ಇದೆ' ಎಂಬ ಮುಸ್ಲಿಂ ಮಹಿಳೆಯ ಹೇಳಿಕೆಯ ದೃಶ್ಯವನ್ನು ಶೇರ್ ಮಾಡಿ 'ನಿಜವಾಗಲೂ ಇಂತಹ ಮುಗ್ಧರು ಅನ್ ಎಜುಕೇಟೆಡ್ ಇರಬೇಕು. 4 ತಿಂಗಳ ಅಂತರದಲ್ಲಿ ಹೆಂಗೆ ಎರಡು ಮಕ್ಕಳು ಹುಟ್ಟೋಕೆ ಸಾಧ್ಯ?' ಎಂದು ಅಚ್ಚರಿ ಜೊತೆ ಪ್ರಶ್ನೆ ಮಾಡಿದ್ದ ಪೊಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.