ಕರ್ನಾಟಕ

karnataka

ETV Bharat / city

ಕೊರೊನಾ ಬರದಿರಲು 'ಹೆಡ್ ಕಾನ್ಸ್‌ಟೇಬಲ್ ಕಷಾಯ': ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡ ಪೊಲೀಸ್​​​ - home made treatment for coroan virus

ರಾಜಧಾನಿಯ ಭಾರತಿನಗರ ಪೊಲೀಸ್​ ಠಾಣೆಯ ಕಾನ್ಸ್‌ಟೇಬಲ್​​ ಒಬ್ಬರು ಕೊರೊನಾ ವೈರಸ್​ ಬರದಂತೆ ರಕ್ಷಣೆ ಪಡೆಯಲು ಕಷಾಯವೊಂದನ್ನು ಸಿದ್ಧಪಡಿಸಿದ್ದು, ಈ ಕುರಿತು ವಿಡಿಯೋ ಒಂದನ್ನು ಮಾಡಿ ಜನಜಾಗೃತಿ ಮೂಡಿಸುತ್ತಿದ್ದಾರೆ.

police-head-constable-made-decoction
ಹೆಡ್ ಕಾನ್ಸ್‌ಟೇಬಲ್ ಕಷಾಯ

By

Published : Jul 7, 2020, 10:26 PM IST

ಬೆಂಗಳೂರು: ಕೊರೊನಾ ಸೋಂಕಿನಿಂದ ಹೇಗೆ ರಕ್ಷಣೆ ಪಡೆಯಬೇಕು ಎಂದು ಭಾರತಿನಗರ ಠಾಣೆಯ ಹೆಡ್ ಕಾನ್ಸ್‌ಟೇಬಲ್​​ ವಿಡಿಯೋ ಮೂಲಕ ಜನರಿಗೆ ತಿಳಿಸಿದ್ದು, ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೆಡ್ ಕಾನ್ಸ್​ಟೇಬಲ್​ ರಾಜ್ ಗೋಪಲ್ ಎಂಬುವರು ಠಾಣೆಯಲ್ಲಿಯೇ ಕಷಾಯ‌ ಸಿದ್ಧಪಡಿಸಿ ಸಿಬ್ಬಂದಿಗೆ ಕೊಡುತ್ತಿದ್ದು, ಸದ್ಯ ಈ ಕಷಾಯವನ್ನ ಎಲ್ಲರೂ ಬಳಸಿ‌ ಎಂದು ವಿಡಿಯೋ‌ ಮೂಲಕ ತಿಳಿಸಿದ್ದಾರೆ.

ಕೊರೊನಾ ಬರದಂತೆ ತಡೆಯಲು ಕಷಾಯ

ಚೆಕ್ಕೆ, ಧನ್ಯ, ಲವಂಗ, ಜಿರಿಗೆ, ಅರಸಿನ, ಅಮೃತಬಳ್ಳಿ, ಶುಂಠಿ, ಲಿಂಬೆಹಣ್ಣು, ಪುದಿನಾ, ಕಾಳುಮೆಣಸು, ಬೆಲ್ಲ ಹಾಗು ತುಳಸಿ ಪುಡಿ ಮಾಡಿಕೊಂಡು ಎಲ್ಲಾ ಪದಾರ್ಥ ಹಾಕಿ ಕುದಿಸಿ ಕಷಾಯ ಮಾಡಿ ದಿನಕ್ಕೆ ಎರಡು ಬಾರಿ‌ ಕುಡಿಯಿರಿ ಎಂದಿದ್ದಾರೆ.

ಹಾಗೆಯೇ ಭಾರತಿನಗರ ಠಾಣೆಯ 75 ಜನ ಸಿಬ್ಬಂದಿ ಪ್ರತಿದಿ‌ನ ಈ ಕಷಾಯ ಕುಡಿಯುತ್ತಿದ್ದು, ಇಲ್ಲಿಯವರೆ ಯಾರೊಬ್ಬರಿಗೂ ಕೊರೊನಾ ಬಂದಿಲ್ಲ‌ ಎಂದಿದ್ದಾರೆ. ಸದ್ಯ ಇವರ ವಿಡಿಯೋ ನೋಡಿ‌ ಹಿರಿಯ ಅಧಿಕಾರಿಗಳು‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details