ಬೆಂಗಳೂರು: ನಿನ್ನೆ ಡಿವೈಎಸ್ಪಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲೇ ಇಂದು ಪೊಲೀಸ್ ದಂಪತಿಯೊಂದು ಮನನೊಂದು ಸಾವಿಗೆ ಶರಣಾದ ಘಟನೆ ನಡೆದಿದೆ.
ಕಾನ್ಸ್ಟೇಬಲ್ಗಳಾದ ಹೆಚ್ ಸಿ ಸುರೇಶ್ ಹಾಗೂ ಶೀಲಾ ಎಂಬ ದಂಪತಿ ಮೃತಪಟ್ಟವರು. ಕಳೆದ ಹತ್ತು ವರ್ಷದ ಹಿಂದೆ ಇವರು ಮದುವೆಯಾಗಿದ್ದರೂ ಮಕ್ಕಳಾಗಿರಲಿಲ್ಲವಂತೆ. ಕಂಟ್ರೋಲ್ ರೂಂನಲ್ಲಿ ಶೀಲಾ ಕರ್ತವ್ಯ ನಿರ್ವಹಿಸುತ್ತಿದ್ರೇ, ಸಂಪಿಗೆಹಳ್ಳಿ ಎಸಿಪಿ ಉಪವಿಭಾಗದ ಕಚೇರಿಯಲ್ಲಿ ರೈಟರ್ ಆಗಿ ಸುರೇಶ್ ಸೇವೆ ಸಲ್ಲಿಸುತ್ತಿದ್ದರು.