ಕರ್ನಾಟಕ

karnataka

ETV Bharat / city

ವೀಕೆಂಡ್​​​ ಕರ್ಫ್ಯೂ ಸಭೆ ಮುನ್ನ ಪೊಲೀಸ್ ಕಮೀಷನರ್ - ಬಿಬಿಎಂಪಿ ಕಮೀಷನರ್ ಸಭೆ - Bengaluru Police Commissioner kamal pant on curfew

ವೀಕೆಂಡ್​​​ ಕರ್ಫ್ಯೂ ಸಭೆ ಮುನ್ನ ಪೂರ್ವಭಾವಿಯಾಗಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ, ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಹಾಗೂ ಬೆಂಗಳೂರು ಡಿಸಿ ಸಭೆ ನಡೆಸಿದ್ದಾರೆ.

meeting
ಮಾಧ್ಯಮಗಳೊಂದಿಗೆ ಬಿಬಿಎಂಪಿ ಕಮಿಷನರ್ ಹಾಗೂ ಪೊಲೀಸ್ ಕಮೀಷನರ್

By

Published : Jan 21, 2022, 2:01 PM IST

Updated : Jan 21, 2022, 2:31 PM IST

ಬೆಂಗಳೂರು: ವಾರಂತ್ಯದ ಕರ್ಫ್ಯೂ ಬಗ್ಗೆ ಇಂದು ರಾಜ್ಯ ಸರ್ಕಾರವು ಸಭೆ ನಡೆಸುತ್ತಿದ್ದು, ಪೂರ್ವಭಾವಿಯಾಗಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಹಾಗೂ ಬೆಂಗಳೂರು ಡಿಸಿ ಮಂಜುನಾಥ್ ಸಭೆ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಬಿಬಿಎಂಪಿ ಕಮಿಷನರ್ ಹಾಗೂ ಪೊಲೀಸ್ ಕಮೀಷನರ್

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೌರವ್ ಗುಪ್ತ, ಸಿಎಂ ಜೊತೆಯಲ್ಲಿ ಸಭೆಯಿದೆ. ಈ ಹಿನ್ನೆಲೆಯಲ್ಲಿ ಪೂರ್ವಾಭಾವಿಯಾಗಿ ಸಭೆಯನ್ನು ಮಾಡಿದ್ವಿ. ಯಾವ್ಯಾವ ಕ್ರಮಕೈಗೊಳ್ಳುವುದರ ಬಗ್ಗೆ ತೀರ್ಮಾನ ಮಾಡಬೇಕಿದೆ. ನಮ್ಮ ಸಲಹೆಯನ್ನು ಮುಖ್ಯಮಂತ್ರಿ ಅವರ ಮುಂದೆ ಇಡ್ತೀವಿ. ವೀಕೆಂಡ್​​​ ಕರ್ಫ್ಯೂ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಆಧರಿಸಿ ನಮ್ಮ‌ ಸಲಹೆಗಳನ್ನು ಸಭೆಯಲ್ಲಿ ತಿಳಿಸುವುದಾಗಿ ಹೇಳಿದರು.

ಇದನ್ನೂ ಓದಿ: ನೈಟ್ ಕರ್ಫ್ಯೂ ಬಿಟ್ಟು ಉಳಿದೆಲ್ಲ ನಿರ್ಬಂಧಗಳನ್ನು ತೆರವುಗೊಳಿಸುವ ಸಾಧ್ಯತೆ

ಕಮಲ್ ಪಂತ್​​ ಮಾತನಾಡಿ, ನಮ್ಮ ಸಲಹೆಗಳು ಏನು ಇಲ್ಲ. ತಜ್ಞರು ಏನು ಮಾತನಾಡ್ತಾರೆ ನೋಡಿಕೊಂಡು ನಾವು ಅಭಿಪ್ರಾಯ ಹೇಳ್ತೀವಿ. ಸರ್ಕಾರ ಯಾವ ಕ್ರಮಕೈಗೊಳ್ಳಲಿ ಅಂತಾರೆ ಅದನ್ನ ತೆಗೆದುಕೊಳ್ಳುತ್ತೇವೆ. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಮಾಡ್ತೀವಿ‌. ನಮ್ಮ ಮಾಹಿತಿಯನ್ನು ಮುಂದೆ ಇಡ್ತೀವಿ, ವೀಕೆಂಡ್ ಕರ್ಫ್ಯೂ ಬಗ್ಗೆ ತಜ್ಞರು ವರದಿ ಕೊಡ್ತಾರೆ.
ನೈಟ್ ಕರ್ಫ್ಯೂ ಬಗ್ಗೆಯೂ ಮಾತನಾಡ್ತಾ ಇದ್ದೀವಿ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದು ತಿಳಿಸಿದರು.


ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 2:31 PM IST

ABOUT THE AUTHOR

...view details