ಕರ್ನಾಟಕ

karnataka

ETV Bharat / city

ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ಸ್ ಮನೆಗಳ ಮೇಲೆ ದಾಳಿ: 74 ಆರೋಪಿಗಳು ವಶಕ್ಕೆ - Inspector Venkatesh gowda

ನಂದಿನಿ ಲೇಔಟ್, ಸ್ವತಂತ್ರ ಯೋಧರ ನಗರ, ಕೂಲಿ ನಗರ ಸೇರಿದಂತೆ ಹಲವೆಡೆ ದಾಳಿ ನಡೆಸಿದ ನಂದಿನಿ ಲೇಔಟ್ ಪೊಲೀಸರು, ರೌಡಿಶೀಟರ್ ಹಾಗೂ ಕಳ್ಳತನ ಪ್ರಕರಣದ ಆರೋಪಿಗಳು ಸೇರಿ ಒಟ್ಟು 74 ಜನರನ್ನು ವಶಕ್ಕೆ ಪಡೆದಿದ್ದಾರೆ.

Nandini layout
ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ಸ್ ಮನೆಗಳ ಮೇಲೆ ದಾಳಿ: 74 ಆರೋಪಿಗಳು ವಶಕ್ಕೆ

By

Published : Jul 26, 2021, 6:31 AM IST

ಬೆಂಗಳೂರು: ಡ್ರಗ್ಸ್ ಸೇವನೆ, ಕಳ್ಳತನ ಸೇರಿದಂತೆ ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಮನೆ ಮೇಲೆ‌ ನಂದಿನಿ ಲೇಔಟ್ ಪೊಲೀಸರು ದಾಳಿ ನಡೆಸಿದ್ದಾರೆ.

ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ನೇತೃತ್ವದಲ್ಲಿ ಇನ್ಸ್​ಪೆಕ್ಟರ್ ವೆಂಕಟೇಶಗೌಡ ತಂಡ, ನಂದಿನಿ ಲೇಔಟ್, ಸ್ವತಂತ್ರ ಯೋಧರ ನಗರ, ಕೂಲಿ ನಗರ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದು, ರೌಡಿಶೀಟರ್ ಮತ್ತು ಕಳ್ಳತನ ಪ್ರಕರಣದ ಆರೋಪಿಗಳು ಸೇರಿ ಒಟ್ಟು 74 ಜನರನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದ ಆರೋಪಿಗಳ ಪೈಕಿ ಮಾದಕ ಸೇವನೆ ಅನುಮಾನದಡಿ ಕೆಲವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ‌. ಅಪರಾಧ ಚಟುವಟಿಕೆ ಹೆಚ್ಚಳ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಮೇರೆಗೆ ದಾಳಿ ನಡೆಸಲಾಗಿದೆ‌.

ಇದನ್ನೂ ಓದಿ:ರಾಜಧಾನಿಯಲ್ಲಿ ಧಾರಾಕಾರ ಮಳೆಗೆ ಅವಾಂತರ: ವಾಯುಭಾರ ಕುಸಿತದಿಂದ ಕರಾವಳಿಯಲ್ಲಿ ಹೈ ಅಲರ್ಟ್

ABOUT THE AUTHOR

...view details