ಬೆಂಗಳೂರು:ಮೊಬೈಲ್ ಶೋ ರೂಂನಲ್ಲಿ ಬೆಲೆ ಬಾಳುವ ಮೊಬೈಲ್‌ಗಳನ್ನು ಕಳ್ಳತನ ಮಾಡಿದ್ದಾತನನ್ನು ಇಂದಿರಾನಗರ ಪೊಲೀಸರು ಬಂಧಿಸಿ, 2.65 ಲಕ್ಷ ರೂ. ಬೆಳೆ ಬಾಳುವ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಗ ಜೀವನ್‌ರಾಮ್ ನಗರದ ತಬ್ರೇಜ್ ಖಾನ್(23) ಬಂಧಿತ ಆರೋಪಿಯಾಗಿದ್ದು, ಆರೋಪಿಯು ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ 100 ಅಡಿ ರಸ್ತೆಯ ರಿಲಾಯನ್ಸ್ ಡಿಜಿಟಲ್ ಶೋ ರೂಮ್‌ನಲ್ಲಿ 2.65 ಲಕ್ಷ ಬೆಲೆ ಬಾಳುವ 4 ಮೊಬೈಲ್‌ಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ಅಂಗಡಿ ಮಾಲೀಕ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ನಂದಿ ಬೆಟ್ಟದ ತಪ್ಪಲಿನಲ್ಲಿ ಇಸ್ಪೀಟ್ ದಂಧೆ: ಪೊಲೀಸರ ದಾಳಿ, 24 ಜೂಜುಕೋರರ ಬಂಧನ
ಈತನ ಸಹಚರರಾದ ವಾಹಿದ್, ಮಜರ್ ಮತ್ತು ಅನಿಲ್ ಎಂಬುವವರೊಂದಿಗೆ ಸೇರಿಕೊಂಡು ಬೈಕ್ ಕಳ್ಳತನ ಮಾಡುತ್ತಿದ್ದ. ಬಳಿಕ ಅದೇ ಬೈಕ್‌ನಲ್ಲಿ ಒಂಟಿಯಾಗಿ ಓಡಾಡುವ ಜನರನ್ನು ಗುರುತಿಸಿ ಮೊಬೈಲ್ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದರು. ಆ ಹಣದಲ್ಲೇ ಜೀವನ ನಡೆಸುತ್ತಿದ್ದರಂತೆ.
ಈಗ ಈ ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಯಿಂದ 4.36 ಲಕ್ಷ ರೂ. ಬೆಲೆ ಬಾಳುವ 12 ಮೊಬೈಲ್‌ಗಳು, ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.