ಕರ್ನಾಟಕ

karnataka

ETV Bharat / city

ದರ್ಶನ್ ಅಭಿಮಾನಿಗಳ ಮಾಸ್ಟರ್​ಪ್ಲಾನ್​: ರಾಬರ್ಟ್ ಚಿತ್ರ ಪೈರಸಿ ಮಾಡುತ್ತಿದ್ದ ಮತ್ತೋರ್ವ ಅರೆಸ್ಟ್

ರಾಬರ್ಟ್ ಚಿತ್ರವನ್ನು ಪೈರಸಿ ಮಾಡುತ್ತಿದ್ದ ಯಾದಗಿರಿ ಮೂಲದ ವಿಶ್ವನಾಥ್ ಎಂಬ ಆರೋಪಿಯನ್ನು ಐಪಿಸಿ ಸೆಕ್ಷನ್ 420, 63, 52ರ ಅಡಿಯಲ್ಲಿ ಮಾಗಡಿ ಪೊಲೀಸರು ಬಂಧಿಸಿದ್ದಾರೆ.

accused Vishwanath
ಬಂಧಿತ ಆರೋಪಿ ವಿಶ್ವನಾಥ್

By

Published : Mar 14, 2021, 12:20 PM IST

ಬೆಂಗಳೂರು: ರಾಬರ್ಟ್ ಚಿತ್ರವನ್ನು ಪೈರಸಿ ಮಾಡುತ್ತಿದ್ದ ಮತ್ತೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪೈರಸಿ ಮಾಡುತ್ತಿದ್ದವನನ್ನು ಹಿಡಿಯಲು ದರ್ಶನ್ ಅಭಿಮಾನಿಗಳು ಪೊಲೀಸರಿಗೆ ಸಹಾಯ ಮಾಡಿದ್ದಾರೆ.

ಯಾದಗಿರಿ ಮೂಲದ ವಿಶ್ವನಾಥ್ ಎಂಬ ಆರೋಪಿಯನ್ನು ಐಪಿಸಿ ಸೆಕ್ಷನ್ 420, 63, 52ರ ಅಡಿಯಲ್ಲಿ ಬಂಧಿಸಲಾಗಿದೆ. ವಿಶ್ವನಾಥ್ ಮತ್ತು ಇನ್ನಿತರ ಆರೋಪಿಗಳು ರಾಬರ್ಟ್ ಸಿನಿಮಾದ ವಿಡಿಯೋ ತಯಾರಿಸಿ ಮಾರಾಟ ಮಾಡುತ್ತಿದ್ದರು. ಸಂಪೂರ್ಣ ಸಿನಿಮಾವನ್ನು ವಾಟ್ಸ್​​ಆ್ಯಪ್​, ಇನ್​ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾಗಳ ಮುಖಾಂತರ ಶೇರ್ ಮಾಡಲಾಗುತ್ತಿತ್ತು. ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ರಾಬರ್ಟ್ ಸಿನಿಮಾದ ವಿಡಿಯೋ ಲಿಂಕ್ ಪತ್ತೆಯಾಗಿದ್ದು, ವಿಡಿಯೋ ಶೇರ್ ಮಾಡುತ್ತಿರುವ ಬಗ್ಗೆ ದರ್ಶನ್ ಅಭಿಮಾನಿಗಳು ಮತ್ತು ಚಿತ್ರ ನಿರ್ಮಾಪಕರ ಮ್ಯಾನೇಜರ್ ಶ್ರೀಕಾಂತ್ ಮೊದಲೇ ಮಾಹಿತಿ ಪಡೆದಿದ್ದರು.

ಬಳಿಕ ಆರೋಪಿಯನ್ನು ಹಿಡಿಯಲು ಮಾಸ್ಟರ್​ಪ್ಲಾನ್ ಮಾಡಿದ್ದರು. ಅದರಂತೆ ತಮಗೆ ಹೆಚ್​ಡಿ ಕ್ವಾಲಿಟಿ ಪ್ರಿಂಟ್ ಕೊಡಲು ಫೋನ್ ಕರೆ ಮಾಡಿ ಮನವಿ ಮಾಡಿದ್ದರು. ವಿಶ್ವನಾಥ್ ಚೆನ್ನಾಗಿರುವ ವಿಡಿಯೋ ಪ್ರಿಂಟ್ ಕೊಡುತ್ತೇನೆ, ಹಣ ಹೆಚ್ಚಾಗುತ್ತದೆ ಎಂದಿದ್ದ. ಪ್ರಸನ್ನ ಥಿಯೇಟರ್ ಬಳಿ ಬರಲು ಹೇಳಿದ್ದ ಅಭಿಮಾನಿಗಳು ಮತ್ತು ಚಿತ್ರ ನಿರ್ಮಾಪಕರ ಮ್ಯಾನೇಜರ್, ಆರೋಪಿ ಬಳಿ ವಿಡಿಯೋ ಪಡೆಯುವ ನಾಟಕವಾಡಿ ರೆಡ್​ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಬರ್ಟ್ ಚಿತ್ರ ನಿರ್ಮಾಪಕ ಉಮಾಪತಿಗೌಡರ ಮ್ಯಾನೇಜರ್‌ ಶ್ರೀಕಾಂತ್ ನೀಡಿದ ದೂರನ್ನು ಸ್ವೀಕರಿಸಿರುವ ಮಾಗಡಿ ರಸ್ತೆ ಪೊಲೀಸರು ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಓದಿ:ರಾಬರ್ಟ್ ಚಿತ್ರ ಪೈರಸಿ ಮಾಡಲು ಯತ್ನಿಸಿದವ ಅರೆಸ್ಟ್

ನಿನ್ನೆ ರಾಬರ್ಟ್ ಪೈರಸಿ ಮಾಡಿತ್ತಿದ್ದ ಮಧು ಎಂಬಾತನನ್ನು ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದು, ಆತನಿಗೂ ಈಗ ಸೆರೆ ಸಿಕ್ಕಿರುವ ಆರೋಪಿ ವಿಶ್ವನಾಥ್​ಗೂ ಸಂಬಂಧವಿದೆಯಾ ಎಂಬುದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ, ಶೇರ್ ಆಗಿರುವ ಲಿಂಕ್​ನ್ನು ಪೊಲೀಸರು ಡಿಲೀಟ್​ ಮಾಡಿಸಿದ್ದಾರೆ.

ABOUT THE AUTHOR

...view details