ಬೆಂಗಳೂರು:ಸಿಲಿಕಾನ್ ಸಿಟಿಯನ್ನೇ ಬೆಚ್ವಿ ಬೀಳಿಸುವಂತೆ ಮಾಡಿದ್ದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಕೊಂಚ ಮಟ್ಟಿಗೆ ತಣ್ಣಗಾಗಿದೆ. ಆದರೆ ಮತ್ತೊಂದೆಡೆ ಬೆಂಗಳೂರಿಗೆ ಸ್ಫೋಟದ ಸಂದೇಶವನ್ನು ಅನಾಮಿಕ ರವಾನಿಸಿರುವ ಕಾರಣ ಕಾನೂನು ಸುವ್ಯವಸ್ಥೆ ನಿಯಮ ಉಲ್ಲಂಘನೆಯನ್ನು ಕಿಡಿಗೇಡಿಗಳು ಮಾಡಬಾರದು ಎಂಬ ಕಾರಣಕ್ಕೆ ಪೂರ್ವ ವಿಭಾಗ, ಹಾಗೆಯೇ ಸಿಟಿಯ ಬಹತೇಕ ಸೂಕ್ಷ ಪ್ರದೇಶಗಳ ಬಳಿ ಸದ್ಯ ಕೆಎಸ್ಆರ್ಪಿ, ಆರ್ಎಎಫ್ ತಂಡ ಪಥಸಂಚಲನ ಮಾಡ್ತಿದೆ.
ಒಮ್ಮೆ ನಡೆದ ಗಲಭೆ ಅಥವಾ ಯಾವುದಾದರೂ ಅಹಿತಕರ ಘಟನೆ ನಗರದಲ್ಲಿ ಮತ್ತೆ ಮರುಕಳಿಸಬಾರದು. ಹಾಗೆಯೇ ಗಲಭೆ ಸೃಷ್ಟಿ ಮಾಡುವವರಿಗೆ ಖಡಕ್ ಸಂದೇಶ ರವಾನೆ ಮಾಡೋದಕ್ಕಾಗಿ ಹಿರಿಯಾಧಿಕಾರಿಗಳ ನೇತೃತ್ವದಲ್ಲಿ ಪಥಸಂಚಲನ ನಡೆಸಲಾಯಿತು. ಮತ್ತೊಂದೆಡೆ ನಗರದಲ್ಲಿಅನಾಮಿಕನೋರ್ವ ಮೆಸೇಜ್ ಟ್ವೀಟ್ ಮಾಡಿದ ಕಾರಣ ಭದ್ರತೆ ಇನ್ನಷ್ಟು ಹೆಚ್ವಿಸಲಾಗಿದೆ.