ಕರ್ನಾಟಕ

karnataka

ETV Bharat / city

ಅಭಿಮಾನಿಗಳಿಗೆ ಕಹಿ ಸುದ್ದಿ​ ಕೊಟ್ಟ ಪೊಗರು ಟೀಂ - ಧ್ರುವ ಸರ್ಜಾ ಸುದ್ದಿ

ದೇಶಾದ್ಯಂತ ಲಾಕ್​ಡೌನ್​ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಪೊಗರು ಟೀಂ ಮತ್ತೊಮ್ಮೆ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅಭಿಮಾನಿಗಳಿಗೆ ಕಹಿ ಸುದ್ದಿ ಕೊಡಲು ಮುಂದೆ ಬಂದಿದೆ.

pogaru Movie
ಧ್ರುವ ಸರ್ಜಾ

By

Published : Mar 25, 2020, 11:16 AM IST

ಬೆಂಗಳೂರು : ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ‘ಲಾಕ್ ಡೌನ್’ ಪರಿಸ್ಥಿತಿ ಉದ್ಭವಿಸಿರುವುದರಿಂದ ಈಗಾಗಲೇ ಬಿಡುಗಡೆಗೆ ಸಿದ್ದಗೊಂಡಿದ್ದ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ಮೊದಲ ಹಾಡು ‘ಖರಾಬು, ಮಾರ್ಚ್​ 27 ರಂದು ಬಿಡುಗಡೆ ಆಗುತ್ತಿಲ್ಲವೆಂದು ತಿಳಿದು ಬಂದಿದೆ.

ಧ್ರುವ ಸರ್ಜಾ

ದೇಶದ ಜನರು ಕೋವಿಡ್ -19 ಇಂದ ಭಯದಲ್ಲಿರುವಾಗ ಹಾಡನ್ನು ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಪೊಗರು ಚಿತ್ರತಂಡ ತೀರ್ಮಾನಿಸಿದೆ. ಈ ಹಾಡಿನ ಬಿಡುಗಡೆ ಏನಿದ್ದರೂ ಏಪ್ರಿಲ್ 14 ರ ನಂತರ ಎಂದು ಕೂಡ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾವನ್ನು ಯಶಸ್ವಿ ನಿರ್ದೇಶಕ ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ, ಸಿನೆಮಾದ ಇನ್ನೊಂದು ವಿಶೇಷ ಅಂದ್ರೆ ಸಿನಿಮಾದಲ್ಲಿ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಧ್ರುವ ಸರ್ಜಾ

ಈ ಸಿನಿಮಾಗಾಗಿ ಧ್ರುವ ಸರ್ಜಾ 40 ಕೆ.ಜಿ ತೂಕ ಇಳಿಸಿಕೊಂಡು ಶಾಲಾ ಹುಡುಗನಂತೆ ಕಾಣೀಸಿಕೊಂಡಿದ್ದರು. ಪುನಃ 50 ಕೆಜಿ ತೂಕ ಹೆಚ್ಚಿಸಿಕೊಂಡು ಅಂತರರಾಷ್ಟ್ರೀಯ ಬಾಡಿ ಬಿಲ್ದರ್ಸ್ ಆದ ಮೋರ್ಗನ್ ಆಸ್ತೆ, ಕೈಗ್ರೀನ್, ಜಾನ್ ಲುಕಾಶ್, ಜೋಸ್ಟೆಟಿಕ್ಸ್ ಅಂತಹ ಘಟಾನುಗಟಿಗಳ ಜೊತೆ ಸೆಣಸಾಡಿದ್ದಾರ ಗಮನ ಸೆಳೆದಿದ್ದಾರೆ.

ABOUT THE AUTHOR

...view details