ಬೆಂಗಳೂರು:ಕೊರೊನಾ ದೃಢಪಟ್ಟ ಹಿನ್ನೆಲೆ ಮಂಗಳವಾರ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ದಲಿತ ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಕೋವಿಡ್ನಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಬಂಡಾಯ ಸಾಹಿತಿ ಸಿದ್ದಲಿಂಗಯ್ಯ ಆರೋಗ್ಯ ಸ್ಥಿತಿ ಗಂಭೀರ - ಸಿದ್ದಲಿಂಗಯ್ಯ ಆರೋಗ್ಯ ಸ್ಥಿತಿ
ಸಿದ್ದಲಿಂಗಯ್ಯ ಅವರ ಪತ್ನಿಗೂ ಕೊರೊನಾ ಸೋಂಕು ತಗುಲಿದ್ದು, ಅವರು ರಂಗದೊರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ನಿಂದ ನಿಮೋನಿಯಾ ಉಂಟಾಗಿದ್ದು, ತಜ್ಞರು ಚಿಕಿತ್ಸೆಯನ್ನ ಮುಂದುವರೆಸಿದ್ದಾರೆ. ನಿಮೋನಿಯಾ ತೀವ್ರವಾಗಿದ್ದು, ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಸಹಾಯದ ಮೂಲಕ ಉಸಿರಾಡುತ್ತಿದ್ದಾರೆ. ಇನ್ನು ಮೊನ್ನೆ ಇವರಿಗೆ ಐಸಿಯು ಬೆಡ್ ಸಿಗದೇ ಇದ್ದಾಗ ಡಿಸಿಎಂ ಅಶ್ವಥ್ ನಾರಾಯಣ್ ಅವರ ಗಮನಕ್ಕೆ ಬಂದಾಗ ಬೆಡ್ ವ್ಯವಸ್ಥೆ ಮಾಡಿದರು. ಸದ್ಯ ಸಿದ್ದಲಿಂಗಯ್ಯ ಅವರ ಪತ್ನಿಗೂ ಕೊರೊನಾ ಸೋಂಕು ತಗುಲಿದ್ದು, ಅವರು ರಂಗದೊರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕವಿಗಳು ಗುಣಮುಖರಾಗಲಿ - ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್:
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ - ಎಂದು ಗೆಳತಿಯನ್ನು ಒಲವಿನಿಂದ ಎಚ್ಚರಿಸಿದ್ದ ನಮ್ಮ ಪ್ರೀತಿಯ ಕವಿ ಸಿದ್ದಲಿಂಗಯ್ಯ ಮಣಿಪಾಲ್ ಆಸ್ಪತ್ರೆಯಲ್ಲಿದ್ದಾರೆ. ಕವಿಗಳು ಬೇಗ ಗುಣಮುಖರಾಗಲಿ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟ್ವಿಟ್ ಮೂಲಕ ಪ್ರಾರ್ಥಿಸಿದ್ದಾರೆ.