ಕರ್ನಾಟಕ

karnataka

ETV Bharat / city

ಬೆಂಗಳೂರಿಗೆ ಮೋದಿ.. ಪ್ರಧಾನಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಯಲಹಂಕ ವಾಯು ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದರು.

modi in Bengaluru
ಬೆಂಗಳೂರಿಗೆ ಮೋದಿ

By

Published : Jun 20, 2022, 12:52 PM IST

Updated : Jun 20, 2022, 1:30 PM IST

ಬೆಂಗಳೂರು:ಎರಡು ದಿನ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿಳಿದರು. ಐಎಎಫ್ ವಿಶೇಷ ವಿಮಾನದಲ್ಲಿ ಯಲಹಂಕ ವಾಯು ನೆಲೆಗೆ ಆಗಮಿಸಿದ ಪ್ರಧಾನಿಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್, ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತ ಕೋರಿದರು.

ಮೋದಿಗೆ ರಾಜ್ಯಪಾಲರಿಂದ ಸ್ವಾಗತ

ಮೋದಿ ಅವರಿಗೆ ಶಾಲು ಹೊದಿಸಿ, ಎಸ್​​ ಎಲ್​ ಬೈರಪ್ಪ ಅವರ ಮಂದ್ರ ಪುಸ್ತಕ ನೀಡಿ ಸಿಎಂ ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ, ಕೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಜರಿದ್ದರು.

ಮೋದಿಗೆ ಮಾಜಿ ಸಿಎಂ ಸ್ವಾಗತ

ಸಚಿವರಾದ ಆರ್ ಅಶೋಕ್, ಆರಗ ಜ್ಞಾನೇಂದ್ರ, ಮಾಧುಸ್ವಾಮಿ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು, ವಾಯು ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು.

(ಇದನ್ನೂ ಓದಿ: ಮೋದಿ ಆಗಮನ ಹಿನ್ನೆಲೆ ಬೆಂಗಳೂರು ರಸ್ತೆ ಸಂಚಾರದಲ್ಲಿ ಬದಲಾವಣೆ: ಪರ್ಯಾಯ ಮಾರ್ಗ ಎಲ್ಲೆಲ್ಲಿ?)

Last Updated : Jun 20, 2022, 1:30 PM IST

ABOUT THE AUTHOR

...view details