ಬೆಂಗಳೂರು:ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ಕುಳಿತಿದ್ದ ವಿಕಲಚೇತನ ವ್ಯಕ್ತಿವೋರ್ವರು ಹೃದಯಘಾತದಿಂದ ಸಾವನ್ನಪ್ಪಿದ್ದು, ಮೃತನ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತನನ್ನು ಆನೇಕಲ್ನ ಚಿಕ್ಕನಹಳ್ಳಿ ನಿವಾಸಿ ಚೆನ್ನಪ್ಪ ಎಂದು ಗುರುತಿಸಲಾಗಿದೆ. ಜಿಗಣಿಯಿಂದ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ಚೆನ್ನಪ್ಪ, ತನಗೆ ಸುಸ್ತಾಗಿರುವುದಾಗಿ ಬಿಎಂಟಿಸಿ ಸಿಬ್ಬಂದಿಗೆ ತಿಳಿಸಿದ್ದರು. ಬಳಿಕ ಸಿಬ್ಬಂದಿ ಅವರಿಗೆ ಟೀ ಕೊಡಿಸಿ ನಿಲ್ದಾಣದಲ್ಲೇ ಕೂರಿಸಿದ್ದರು. ಕೆಲ ಹೊತ್ತಿನ ಬಳಿಕ ಆ ವ್ಯಕ್ತಿ ಹೃದಯಘಾತದಿಂದ ಕೂತಲ್ಲೇ ಕುಸಿದು ಸಾವನ್ನಪ್ಪಿದ್ದಾರೆ.