ಬೆಂಗಳೂರು: ರಾಜಕಾರಣಿಗಳು ಹಾಗು ಅಧಿಕಾರಿಗಳ ದೂರವಾಣಿ ಕದ್ದಾಲಿಕೆ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಿನ್ನೆಯಿಂದ ಈ ವಿಚಾರಣೆ ನಡೆಯುತ್ತಿದ್ದು ಇವತ್ತು ಕೆಕೆ ಗೆಸ್ಟ್ ಹೌಸ್‌ಗೆ ಆಗಮಿಸಿದ ಅಲೋಕ್ ಮತ್ತೆ ಕೇಂದ್ರ ತನಿಖಾ ತಂಡದೆದುರು ಹಾಜರಾದ್ರು.
ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆ: ಮುಂದುವರೆದ ಅಲೋಕ್ ಕುಮಾರ್ ವಿಚಾರಣೆ - ಸಿಬಿಐ ವಿಚಾರಣೆ
ದೂರವಾಣಿ ಕದ್ದಾಲಿಕೆ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಕೆಕೆ ಗೆಸ್ಟ್ ಹೌಸ್ನಲ್ಲಿರುವ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಅಲೋಕ್ ಕುಮಾರ್
ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಗೆ ಪೆನ್ಡ್ರೈವ್ ಪ್ರಮುಖ ಸಾಕ್ಷಿಯಾಗಿದ್ದು, ಅದಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಅಲೊಕ್ ಅವರಿಗೆ ತಾಂತ್ರಿಕ ವಿಭಾಗದ ಇನ್ಸ್ಪೆಕ್ಟರ್ ಮಿರ್ಜಾ ಅಲಿ ಆಡಿಯೋ ಸಂಭಾಷಣೆಯನ್ನ ಪೆನ್ಡ್ರೈವ್ನಲ್ಲಿ ಕಾಪಿ ಮಾಡಿ ಕೊಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ಪೆನ್ಡ್ರೈವ್ಗಾಗಿ ಶೋಧ ಕಾರ್ಯ ಹಾಗೂ ಅಲೋಕ್ ಕುಮಾರ್ ವಿಚಾರಣೆ ಮುಂದುವರೆದಿದೆ.