ಬೆಂಗಳೂರು:ಕಳ್ಳತನ ಮಾಡಿದ್ದ ಸ್ಕೂಟರ್ ಬಳಸಿಕೊಂಡು ಮೊಬೈಲ್ ಫೋನ್ಗಳನ್ನ ಎಗರಿಸುತ್ತಿದೆ ಮೂವರು ಖದೀಮರನ್ನು ಜೆಜೆ ನಗರ ಪೊಲೀಸರು ಬಂಧಿಸಿದ್ದಾರೆ. ಒಟ್ಟು 13.6 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಸ್ಕೂಟರ್ & 86 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲಿಕ್ ಮುಬಾರಕ್, ಮುಜಾಹಿದ್ ಮತ್ತು ಖಾಸಿರ್ ಬಂಧಿತ ಆರೋಪಿಗಳು. ಫೆಬ್ರವರಿ 2ರ ಸಂಜೆ 5.30ರ ಸುಮಾರಿಗೆ ಇಬ್ಬರು ಕಳ್ಳರು ದ್ವಿ-ಚಕ್ರ ವಾಹನದಲ್ಲಿ ಬಂದು ರಸ್ತೆ ದಾಟುತ್ತಿದ್ದ ಮಹಿಳೆಯ ಕೈಯಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಇದನ್ನೂ ಓದಿರಿ:ಮೋಜು-ಮಸ್ತಿಗಾಗಿ ಬೈಕ್ ಕಳ್ಳತನ: ಮೂವರ ಬಂಧನ
ಈ ಸಂದರ್ಭದಲ್ಲಿ ಮಹಿಳೆಯ ಸಹಾಯಕ್ಕಾಗಿ ಧಾವಿಸಿದ ಸಾರ್ವಜನಿಕರು ಇಬ್ಬರನ್ನು ಹಿಡಿದು ಬೈಕ್ ಮತ್ತು ಮೊಬೈಲ್ ಸಮೇತ ಪೊಲೀಸರಿಗೆ ಒಪ್ಪಿಸಿದ್ದರು. ಬೈಕ್ ಮತ್ತು ಮೊಬೈಲ್ ಕಳ್ಳತನದ ಕುರಿತು ಪ್ರಾಥಮಿಕ ತನಿಖೆ ಕೈಗೊಂಡಾಗ ಆರೋಪಿಗಳು ಸಮಂಜಸ ಉತ್ತರ ನೀಡದಿದ್ದರೂ ಅನುಮಾನದ ಮೇರೆಗೆ ಪ್ರಕರಣ ದಾಖಲಿಸಿ ಸಿಬ್ಬಂದಿ ತನಿಖೆ ಕೈಗೊಂಡಿದ್ದರು ಎಂದು ತಿಳಿಸಿದ್ದಾರೆ. ಇನ್ಸ್ಪೆಕ್ಟರ್ ಮಂಜು ಮತ್ತು ಸಿಬ್ಬಂದಿ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿ ಮತ್ತೊಬ್ಬ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮೊಬೈಲ್ ಫೋನ್ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಬಾಯಿಬಿಟ್ಟ ಮೇರೆಗೆ ಪೊಲೀಸ್ ಸಿಬ್ಬಂದಿ ಸುಮಾರು 13.60 ಲಕ್ಷ ರೂ. ಬೆಲೆ ಬಾಳುವ ಸ್ಕೂಟರ್ ಮತ್ತು 86 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆಂದು ಸಂಜೀವ್ ಪಾಟೀಲ್ ತಿಳಿಸಿದ್ದಾರೆ.