ಬೆಂಗಳೂರು:ದಿನ ಕಳೆದಂತೆಬೇಸಿಗೆ ಧಗೆ ಹೆಚ್ಚುತ್ತಿದ್ದು, ನಗರದ ಹೊರಭಾಗದ ಕನಕಪುರ ರಸ್ತೆ ಬಳಿಯ ತುರಹಳ್ಳಿಯಲ್ಲಿರುವ ಕಾಡುಪ್ರಾಣಿಗಳು ಜೀವಜಲಕ್ಕಾಗಿ ಪರದಾಟ ನಡೆಸುತ್ತಿವೆ. ಇದನ್ನು ಗಮನಿಸಿದ 'ಪೀಪಲ್ ಫಾರ್ ಆನಿಮಲ್ ಆಸ್ಪತ್ರೆ' ಎನ್ಜಿಒ ಜನರಲ್ ಮ್ಯಾನೆಜರ್ ನವಾಝ್ ಶರೀಫ್ ನೇತೃತ್ವದಲ್ಲಿ ಕಾಡು ಪ್ರಾಣಿಗಳಿಗೆ ನೀರುಣಿಸಲು ಹೊಂಡಗಳಿಗೆ ನೀರು ಪೂರೈಸುವ ಕೆಲಸ ನಡೆಯುತ್ತಿದೆ.
ಮೂಕಪ್ರಾಣಿಗಳ ದಾಹ ತಣಿಸಲು ಎನ್‌ಜಿಓ ಮಾಡಿದ್ದೇನು ಗೊತ್ತೇ..? - undefined
ರಾಜ್ಯದಲ್ಲಿ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಜನರೇ ಸೂರ್ಯನ ಪ್ರಕೋಪಕ್ಕೆ ತತ್ತರವಾಗುತ್ತಿದ್ದರೆ ಇನ್ನು ಕಾಡು ಪ್ರಾಣಿಗಳ ಪಾಡೇನು..? ಇದನ್ನು ಮನಗಂಡ 'ಪೀಪಲ್ ಫಾರ್ ಆ್ಯನಿಮಲ್ ಆಸ್ಪತ್ರೆ' ಎನ್ಜಿಒ ಸಂಸ್ಥೆ ವನ್ಯಜೀವಿಗಳ ದಾಹ ತಣಿಸಲು ಹೊಂಡಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುತ್ತಿದೆ.

ಟ್ಯಾಂಕರ್ ನೀರು ಪೂರೈಕೆಗೆ ಮುಂದಾದ ಪಿಎಫ್ಎ ಸಂಸ್ಥೆ
ಕಾಡಿನಲ್ಲಿರುವ ಹೊಂಡಗಳಿಗೆ ನೀರು ತುಂಬಿಸುತ್ತಿರುವುದು
'ಪೀಪಲ್ ಫಾರ್ ಆನಿಮಲ್ ಆಸ್ಪತ್ರೆ' ಎನ್ಜಿಒ, ತುರಹಳ್ಳಿ ಕಾಡಿನಲ್ಲಿರುವ ಪ್ರಾಣಿ-ಪಕ್ಷಿಗಳ ದಾಹ ತಣಿಸಲು ಮುಂದಾಗಿದ್ದು, ಅಲ್ಲಿರುವಂತಹ ಹೊಂಡಗಳಿಗೆ ಟ್ಯಾಂಕರುಗಳ ಮೂಲಕ ನೀರು ಹೊಡೆಯುವ ಕೆಲಸ ನಡೆಯುತ್ತಿದೆ. ಇದು ಮೂರು ತಿಂಗಳ ಯೋಜನೆಯಾಗಿದ್ದು, ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರತಿದಿನ ನಾಲ್ಕು ಟ್ಯಾಂಕರುಗಳ ಮೂಲಕ ಕಾಡಿನಲ್ಲಿರುವ ಹೊಂಡಗಳಿಗೆ ನೀರು ತುಂಬಲಾಗುತ್ತಿದೆ. ಇದಕ್ಕಾಗಿ ಜನರಿಂದ ದೇಣಿಗೆ ಸಂಗ್ರಹ ಹಾಗೂ ಆನ್ಲೈನ್ ಡೊನೇಷನ್ಗಳನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಪಿಎಫ್ಎ ಸಂಸ್ಥೆಯ ಇಶಿತಾ ತಿಳಿಸಿದರು.