ಬೆಂಗಳೂರು: ಒಮ್ಮೆಲೆ ದಿಢೀರ್ ಏರಿಕೆಯಾಗಿ ಜನರಿಗೆ ಶಾಕ್ ನೀಡಿದ್ದ ಪೆಟ್ರೋಲ್, ಡೀಸೆಲ್ ದರದಲ್ಲಿ ಕಳೆದ 26 ದಿನಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ಇಂದು ಸೋಮವಾರ ಕೂಡ ತೈಲ ದರ ಸ್ಥಿರವಾಗಿದೆ. ಮಾರ್ಚ್ ತಿಂಗಳೊಂದರಲ್ಲೇ ತೈಲ ದರದಲ್ಲಿ 10 ರೂ. ಏರಿಕೆಯಾಗಿದ್ದು, ಸವಾರರಲ್ಲಿ ಆತಂಕ ಮೂಡಿಸಿತ್ತು.
ಪೆಟ್ರೋಲ್, ಡೀಸೆಲ್: ಇಂದು ಯಾವ ನಗರಗಳಲ್ಲಿ ಎಷ್ಟು ದರ?
ಸೋಮವಾರ ಕೂಡ ಸವಾರರು ತೈಲ ಬೆಲೆ ಏರಿಕೆ ಬಗ್ಗೆ ಚಿಂತೆಪಡಬೇಕಿಲ್ಲ. ಏಕೆಂದರೆ ಇಂದು ಕೂಡ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ ₹ 105.41 ಇದ್ದು, ಲೀಟರ್ ಡೀಸೆಲ್ ಬೆಲೆ ₹ 96.67 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 120.51, ಡೀಸೆಲ್ ₹ 104.71ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 110.85 ರೂ. ಹಾಗೂ ಲೀಟರ್ ಡೀಸೆಲ್ ದರ 100.94 ರೂಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 115.12 ರೂ. ಡೀಸೆಲ್ ಬೆಲೆ ಲೀಟರ್ಗೆ 99.83 ರೂ. ಆಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ಗೆ 116.92 ರೂ ಇದ್ದು, ಲೀಟರ್ ಡೀಸೆಲ್ ಬೆಲೆ 103.69 ರೂ ನಿಗದಿಯಾಗಿದೆ. ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 119.47 ರೂ ಹಾಗೂ ಲೀಟರ್ ಡೀಸೆಲ್ ದರ 105.47 ರೂ.ನಿಗದಿಯಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿನ ದರ ಪಟ್ಟಿ:
ನಗರಗಳು | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 111.11 | 94.81 |
ಮಂಗಳೂರು | 110.92 | 94.60 |
ಮೈಸೂರು | 110.59 | 94.34 |
ಹುಬ್ಬಳ್ಳಿ | 110.81 | 94.56 |
ದಾವಣಗೆರೆ | 112.82 | 96.54 |
ಶಿವಮೊಗ್ಗ | 11.54 | 96.02 |