ಕರ್ನಾಟಕ

karnataka

ETV Bharat / city

ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ಸುಂಕದಿಂದ ರಾಜ್ಯದ ಬೊಕ್ಕಸ ಸೇರುತ್ತಿದೆ ಬರಪೂರ ಆದಾಯ! - state revenue increased

2021-22ನೇ ಸಾಲಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಕರ್ನಾಟಕ ಮಾರಾಟ ತೆರಿಗೆ(ಕ.ಮಾ.ತೆ) ಮೂಲಕ ರಾಜ್ಯ ಉತ್ತಮ ಆದಾಯ ಸಂಗ್ರಹ ಮಾಡಿದೆ. 2021-22ನೇ ಸಾಲಿನಲ್ಲಿ ರಾಜ್ಯ ಪೆಟ್ರೋಲ್, ಡೀಸೆಲ್ ಮಾರಾಟ ಮೇಲಿನ ತೆರಿಗೆ ರೂಪದಲ್ಲಿ ಬರೋಬ್ಬರಿ 19,041.87 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ.

petrol and diesel Taxes increased the state revenue
ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ಸುಂಕದಿಂದ ರಾಜ್ಯದ ಬೊಕ್ಕಸ ಸೇರುತ್ತಿದೆ ಬರಪೂರ ಆದಾಯ

By

Published : Apr 29, 2022, 7:43 AM IST

ಬೆಂಗಳೂರು: ತೈಲ‌ ಬೆಲೆ ಏರಿಕೆಯಾಗುತ್ತಲಿದೆ. ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡುವ ಪ್ರಸ್ತಾಪ ಮುನ್ನಲೆಗೆ ಬಂದಿದೆ. ನಿನ್ನೆ ಪ್ರಧಾನ ಮಂತ್ರಿ ಮೋದಿ ಅವರು ರಾಜ್ಯಗಳು ತೈಲ ಮಾರಾಟ ಮೇಲಿನ ತಮ್ಮ ಸುಂಕ ಇಳಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.‌ ಇತ್ತ ಸಿಎಂ ಬೊಮ್ಮಾಯಿ ಸುಂಕ ಇಳಿಸುವ ಬಗ್ಗೆ ಮುಂದೆ ನೋಡೋಣ ಎಂದಿದ್ದಾರೆ. ಅಷ್ಟಕ್ಕೂ ತೈಲ ಮಾರಾಟದ ಮೇಲಿನ ಸುಂಕ ರಾಜ್ಯದ ಬೊಕ್ಕಸಕ್ಕೆ ಬಹುಪಾಲು ಕೊಡುಗೆ ನೀಡುತ್ತಿದೆ. ಅದರಲ್ಲೂ ಈ ಬಾರಿಯಂತೂ ತೈಲದ ಮೇಲಿನ ಮಾರಾಟ ತೆರಿಗೆಯಿಂದ ರಾಜ್ಯ ಸರ್ಕಾರ ಭರ್ಜರಿ ಆದಾಯ ಸಂಗ್ರಹ ಮಾಡಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ಸುಂಕದಿಂದ ರಾಜ್ಯದ ಬೊಕ್ಕಸ ಸೇರುತ್ತಿದೆ ಬರಪೂರ ಆದಾಯ

ಕಳೆದ ವರ್ಷ ನವೆಂಬರ್​ನಲ್ಲಿ ರಾಜ್ಯ ಸರ್ಕಾರ ತೈಲದ ಮೇಲಿನ ಮಾರಾಟ ತೆರಿಗೆ ಕಡಿತಗೊಳಿಸಿತ್ತು. ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.35ರಿಂದ ಶೇ.25.9ಕ್ಕೆ ಇಳಿಕೆ ಮಾಡಿದ್ದರೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.24 ರಿಂದ ಶೇ.14.34ಕ್ಕೆ ಕಡಿತ ಮಾಡಿತ್ತು. ಇದೀಗ ಹಣಕಾಸು ಸ್ಥಿತಿಗತಿ ಮೇಲೆ ಸುಂಕ ಕಡಿತದ ನಿರ್ಧಾರ ಅವಲಂಬಿತವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಹೆಚ್ಚು ಆದಾಯ ಸಂಗ್ರಹ:2021-22ನೇ ಸಾಲಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಕರ್ನಾಟಕ ಮಾರಾಟ ತೆರಿಗೆ(ಕ.ಮಾ.ತೆ) ಮೂಲಕ ರಾಜ್ಯ ಉತ್ತಮ ಆದಾಯ ಸಂಗ್ರಹ ಮಾಡಿದೆ. 2021-22ನೇ ಸಾಲಿನಲ್ಲಿ ರಾಜ್ಯ ಪೆಟ್ರೋಲ್, ಡೀಸೆಲ್ ಮಾರಾಟ ಮೇಲಿನ ತೆರಿಗೆ ರೂಪದಲ್ಲಿ ಬರೋಬ್ಬರಿ 19,041.87 ಕೋಟಿ ರೂ. ಆದಾಯ ಸಂಗ್ರಹ ಮಾಡಿದೆ. ಕೋವಿಡ್ ಬಳಿಕ ಸೊರಗಿದ್ದ ಆದಾಯಕ್ಕೆ ತೈಲ ಮೇಲಿನ ಮಾರಾಟ ತೆರಿಗೆ ಪುನಶ್ಚೇತನ ನೀಡಿದಂತಾಗಿದೆ. 2020ರ ಕೋವಿಡ್ ಬಳಿಕ ತೈಲ ಮಾರಾಟ ಮೇಲಿನ ತೆರಿಗೆ ರೂಪದಲ್ಲಿ ಈ ಬಾರಿ ಅತಿ ಹೆಚ್ಚು ಆದಾಯ ಸಂಗ್ರಹ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2021-22ಸಾಲಿನಲ್ಲಿ ಗರಿಷ್ಠ ತೈಲ ಮೇಲಿನ ಮಾರಾಟ ತೆರಿಗೆ ಸಂಗ್ರಹ ಮಾಡಲಾಗಿದೆ. ಬಹುತೇಕ ಆದಾಯ ಮೂಲಗಳು ಸೊರಗಿದ್ದರೆ, ಕರ್ನಾಟಕ ಮಾರಾಟ ತೆರಿಗೆ ಮೂಲಕ ಅತಿ ಹೆಚ್ಚು ಆದಾಯ ಸಂಗ್ರಹಿಸಲಾಗಿದೆ. ಪೆಟ್ರೋಲ್, ಡೀಸೆಲ್ ಮಾರಾಟ ಮೇಲಿನ ತೆರಿಗೆ ರೂಪದಲ್ಲಿ ರಾಜ್ಯದ ಆದಾಯ ಕಳೆದ ನಾಲ್ಕು ವರ್ಷಗಳಿಂದ ಪ್ರಗತಿ ಕಾಣುತ್ತಿದೆ. ಕೋವಿಡ್ ಲಾಕ್‌ಡೌನ್ ಹಿನ್ನೆಲೆ 2020ರಲ್ಲಿ ಕೊಂಚ ಹಿನ್ನೆಡೆ ಕಂಡಿದ್ದ ಮಾರಾಟ ತೆರಿಗೆ ಸಂಗ್ರಹ ಮತ್ತೆ ಗಣನೀಯ ಚೇತರಿಕೆ ಕಂಡಿದೆ.

ಇದನ್ನೂ ಓದಿ:ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ.. ದಾಳಿ ನಡೆಸಿದ ಎಸಿಬಿ, ಅಧಿಕಾರಿಗಳಿಂದ ದಾಖಲೆ ಪರಿಶೀಲನೆ

2018-19ರಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಸಂಗ್ರಹ 14,908.80 ಕೋಟಿ ರೂ. ಆಗಿದ್ದರೆ 2019-20ರಲ್ಲಿ 15,981.28 ಕೋಟಿ ರೂ. 2020-21ರಲ್ಲಿ 15,860.56 ಕೋಟಿ ರೂ. ಸಂಗ್ರಹವಾಗಿದೆ. ಅದೇ 2021-22ರಲ್ಲಿ ಬರೋಬ್ಬರಿ 19,041.87 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹಿಸಿದೆ.

ABOUT THE AUTHOR

...view details