ಕೆ.ಆರ್.ಪುರ(ಬೆಂಗಳೂರು): ವ್ಯಕ್ತಿಯ ಕುಡಿತದ ಚಟ ಬಿಡಿಸಲು ಕುಟುಂಬಸ್ಥರು ಕುಡಿತದ ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ಬಲವಂತವಾಗಿ ಕಾರಿನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಇದನ್ನು ಕಂಡ ಸ್ಥಳೀಯರು 112ಕ್ಕೆ ಕರೆ ಮಾಡಿ ಹೇಳಿದ್ದೇನು, ಮುಂದಾಗಿದ್ದೇನು? ಎಂಬುದನ್ನು ಕೇಳಿದ್ರೆ ಆಶ್ಚರ್ಯಪಡುತ್ತೀರಿ.
ಡಿ. 19ರ ಮಧ್ಯರಾತ್ರಿ 11:50ರ ಸುಮಾರಿಗೆ ಕೆಆರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ಲೇಔಟ್ ಬಳಿಯ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ಓಮ್ನಿ ಕಾರಿನಲ್ಲಿ ಬಂದ ಗುಂಪೊಂದು ಬಲವಂತವಾಗಿ ಕರೆದೊಯ್ಯುತ್ತಾರೆ.
ಇದನ್ನು ಕಂಡ ಸ್ಥಳೀಯರು 112ಕ್ಕೆ ಕರೆ ಮಾಡಿ ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಬಂದ ಕೆಆರ್‌ಪುರ ಪೊಲೀಸರು ತಮ್ಮ ಕಾರ್ಯ ಚುರುಕುಗೊಳಿಸಿದ್ದಾರೆ.
ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ವ್ಯಕ್ತಿಯನ್ನು ಬಲವಂತವಾಗಿ ಯುವಕರ ಗುಂಪೊಂದು ಕಾರಿನಲ್ಲಿ ಕರೆದೊಯ್ಯುತ್ತಿರುವ ದೃಶ್ಯ ಕಂಡಿದೆ. ತಕ್ಷಣವೇ ಆ್ಯಕ್ಟೀವ್ ಆದ ಪೊಲೀಸರು ಕಾರಿನ ನಂಬರ್ ಟ್ರೇಸ್ ಮಾಡಿದ್ದಾರೆ. ಆಗ ಇದು ಕುಡಿತದ ಚಟ ಬಿಡಿಸುವ ಪುನರ್ವಸತಿ ಕೇಂದ್ರದ ವಾಹನ ಎಂದು ಗೊತ್ತಾಗಿದೆ.