ಬೆಂಗಳೂರು: ಈವರೆಗೆ ನಾಯಿಗಳು ಕಾಣೆಯಾದರೆ ಠಾಣೆ ಮೆಟ್ಟಿಲೇರಿ ನಾಯಿ ಹುಡುಕಿಕೊಡಿ ಅಂತಾ ದೂರು ಕೊಟ್ಟವರನ್ನು ನೀವು ನೋಡಿರುತ್ತೀರಿ. ಆದ್ರೆ, ಇಲ್ಲೊಬ್ಬರು ಬೆಕ್ಕು ಕಳೆದ್ಹೋಗಿದೆ, ಹುಡುಕಿಕೊಡಿ ಎಂದು ತಿಲಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಿಲಕನಗರ ಠಾಣೆಯಲ್ಲಿ ಆಲಿಜೆ ಹೆಸರಿನ ಹೆಣ್ಣು ಬೆಕ್ಕು ಮಿಸ್ಸಿಂಗ್ ಕುರಿತು ಎಫ್ಐಆರ್ ಕೂಡ ದಾಖಲಾಗಿದೆ.
ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವರು, ತಮ್ಮ ಪರ್ಶಿಯನ್ ಕ್ಯಾಟ್ ಜನವರಿ 15ರಂದು ನಾಪತ್ತೆಯಾಗಿದೆ ಎಂದು ದೂರು ನೀಡಿದ್ದಾರೆ.
ಯಾರೋ ದುಷ್ಕರ್ಮಿಗಳು ಮೇಲ್ಛಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ಅನುಮಾನಿಸಿರೋ ಮಿಸ್ಬಾ ಶರೀಫ್, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ರೂ. ಬಹುಮಾನ ಕೊಡುವುದಾಗಿಯೂ ಘೋಷಣೆ ಮಾಡಿದ್ದಾರೆ.