ಬೆಂಗಳೂರು :ಕಂದಾಯ ಸಚಿವ ಆರ್ ಅಶೋಕ್ ಇಂದು ಮಧ್ಯಾಹ್ನ ಶಿವಾಜಿನಗರದ ಜನನಿಬಿಡ ಪ್ರದೇಶಗಳಿಗೆ ತೆರಳಿ ಗುಂಪು ಗುಂಪಾಗಿ ಸೇರಿದ್ದ ಜನರಿಗೆ ಕೈಮುಗಿದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಿದರು. ಮನೆ ಬಿಟ್ಟು ಹೊರ ಬರಬೇಡಿ ಎಂದು ಕೇಳಿಕೊಂಡರು.
ರಸ್ತೆಯಲ್ಲಿ ಗುಂಪಾಗಿದ್ದ ಜನರಿಗೆ ಕೈಮುಗಿದು ಸಚಿವ ಆರ್.ಅಶೋಕ್ ಮನವಿ.. - ಕೈಮುಗಿದು ಮನವಿ ಮಾಡಿದ ಸಚಿವ ಆರ್.ಅಶೋಕ್
ಲಾಕ್ಡೌನ್ ಉಲ್ಲಂಘಿಸಿ ರಸ್ತೆಯಲ್ಲಿದ್ದ ಜನರಿಗೆ ಕಂದಾಯ ಸಚಿವ ಆರ್.ಅಶೋಕ್ ಮತ್ತು ಸ್ಥಳೀಯ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಮನೆಯಿಂದ ಯಾರೂ ಹೊರಗೆ ಬರಬೇಡಿ ಎಂದು ಮನವಿ ಮಾಡಿದರು.
ಕೈಮುಗಿದು ಮನವಿ ಮಾಡಿದ ಸಚಿವ ಆರ್.ಅಶೋಕ್
ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್ ಕೂಡಾ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿದರು. ಈ ವೇಳೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದರು.