ಬೆಂಗಳೂರು :ನಗರದ ಸೌತ್ ಎಂಡ್ ಸರ್ಕಲ್ನಲ್ಲಿ ನಕಲಿ ವಿಕಲಚೇತನನ ಬಣ್ಣ ಬಟಾ ಬಯಲಾಗಿದೆ. ಕೈಯಿಲ್ಲ ಎಂದು ನಟಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೆ ಜನರು ಛೀಮಾರಿ ಹಾಕಿದ್ದಾರೆ.
ಎರಡೂ ಕೈಗಳಿದ್ದರೂ ಕೂಡ ಈ ಭೂಪ ಒಂದು ಕೈಯನ್ನು ಬಟ್ಟೆಯೊಳಗೆ ಅಡಗಿಸಿಟ್ಟುಕೊಂಡು ಕೈಯಿಲ್ಲದಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ. ಒಂದು ಕೈಯಲ್ಲಿ ಊರುಗೋಲು ಹಿಡಿದು ಹೋಗಿ ಬರುವ ವಾಹನ ಸವಾರರ ಬಳಿ ಹಣ ಬೇಡುತ್ತಿದ್ದ. ಪ್ರಯಾಣಿಕರೂ ಸಹ ಕೊರೊನಾ ಸಮಯ, ತಿನ್ನಲು ಏನೂ ಇಲ್ವೇನೋ ಎಂದು ಅಯ್ಯೋಪಾಪ ಎಂಬ ಕನಿಕರದಿಂದ ದುಡ್ಡು ನೀಡುತ್ತಿದ್ದರು.