ಬೆಂಗಳೂರು: ಯುಗಾದಿ ಹೊಸ ತೊಡಕು ವೇಳೆ ಮಟನ್ ಬಿರಿಯಾನಿ, ಮಟನ್ ಸಾಂಬಾರ್ ಸವಿಯಲು ಭರ್ಜರಿ ತಯಾರಿ ನಡೆಯುತ್ತಿದೆ. ಬೆಳಗ್ಗಿನಿಂದಲೇ ಬೆಂಗಳೂರು ಹೊರವಲಯದ ಹಲವೆಡೆ ಮಟನ್ ಖರೀದಿಸಲು ಜನ ಸೇರಿದ್ದರು. ಕೆ.ಆರ್.ಪುರ, ಆವಲಹಳ್ಳಿ, ಮೇಡ ಹಳ್ಳಿ, ಹೊಸಕೋಟೆ ಸೇರಿದಂತೆ ಹಲವೆಡೆ ಮಟನ್ ಶಾಪ್ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮತ್ತೆ ಕೆಲವು ಕಡೆ ಗುಂಪು ಗುಂಪಾಗಿ ಮಟನ್-ಚಿಕನ್ ಖರೀದಿಸಲು ನಿಂತಿದ್ದಾರೆ.
ಪ್ರತಿ ವರ್ಷ ಮಧ್ಯರಾತ್ರಿಯಿಂದಲೇ ವ್ಯಾಪಾರ ಆರಂಭಿಸುವ ಆವಲಹಳ್ಳಿ ಮಟನ್ ಶಾಪ್ ಗ್ರಾಹಕರಿಂದ ತುಂಬಿ ತುಳುಕುತ್ತಿತ್ತು. ಇಲ್ಲಿ ಬೆಳಗಿನ ಜಾವ 3 ಗಂಟೆಯಿಂದಲೇ ಮಾಂಸ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಉಳಿದಂತೆ ಎಲ್ಲಾ ಮಟನ್, ಚಿಕನ್, ಪೊರ್ಕ್, ಫಿಶ್ ಶಾಪ್‌ಗಳು ಬೆಳಗ್ಗೆ 4 ಗಂಟೆಯಿಂದ ವ್ಯಾಪಾರ ಶುರು ಮಾಡಿವೆ.