ಬೆಂಗಳೂರು: ಖಾಸಗಿ ವಾಹನಗಳ ಮೇಲೆ ಜನ ಪ್ರತಿನಿಧಿ, ಸಂಘಟನೆ ಸದಸ್ಯರು, ಹೀಗೆ ನಾನಾ ರೀತಿಯ ನಾಮಫಲಕಗಳನ್ನು ಅಳವಡಿಸಿಕೊಂಡು ವಾಹನದಲ್ಲಿ ಸಂಚರಿಸುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿ, ಇದಕ್ಕೆ ಕಡಿವಾಣ ಹಾಕಲು ಸೂಚಿಸಿದೆ.
ವಾಹನದಲ್ಲಿ ಜನಪ್ರತಿನಿಧಿ, ಸಂಘಟನೆ ಹೆಸರು ಅಳವಡಿಕೆ ಕಾನೂನು ಬಾಹಿರ: ಹೈಕೋರ್ಟ್ ಆದೇಶ - ಬೆಂಗಳೂರು ಹೈಕೋರ್ಟ್ ನ್ಯೂಸ್
ವಾಹನಗಳ ಮೇಲೆ ಜನಪ್ರತಿನಿಧಿ, ಸಂಘಟನೆ ಸದಸ್ಯರು, ಹೀಗೆ ನಾನಾ ರೀತಿಯ ನಾಮ ಫಲಕಗಳನ್ನು ಅಳವಡಿಸಿಕೊಂಡು ವಾಹನದಲ್ಲಿ ಸಂಚರಿಸುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿ, ಇದಕ್ಕೆ ಬ್ರೇಕ್ ಹಾಕಲು ಸೂಚಿಸಿದೆ.
high court
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಹೈಕೋರ್ಟ್ ಸರ್ಕಾರೇತರ ವಾಹನಗಳ ಮೇಲೆ ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು ತಮ್ಮ ಸಂಸ್ಥೆಗಳ ಅಥವಾ ಹುದ್ದೆಗಳ ನಾಮಫಲಕಗಳನ್ನು ಅಳವಡಿಸಿ ಸಂಚರಿಸುವುದು ಕಾನೂನು ಬಾಹಿರ. ಹೀಗಾಗಿ ಈ ತರಹದ ವಾಹನಗಳ ನಾಮಫಲಕ ತೆರವುಗೊಳಿಸಲು ಕೂಡಲೇ ಕ್ರಮ ಜರುಗಿಸಬೇಕು, ಜೊತೆಗೆ ಈ ಕುರಿತ ವರದಿಯನ್ನು ಜನವರಿ 22 ಕ್ಕೆ ನೀಡಲು ಸೂಚಿಸಿ, ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.