ಬೆಂಗಳೂರು: ನಾನಾ ಹೆಸರುಗಳುಳ್ಳ ಗಂಗಾಧರನ ನೆನೆಯುವ ದಿನವೇ ಮಹಾಶಿವರಾತ್ರಿ. ಇಂದು ರಾಜಧಾನಿ ಬೆಂಗಳೂರಿನ ಎಲ್ಲ ಶಿವನ ದೇಗುಲದಲ್ಲಿ ಶಿವ ಭಕ್ತರ ದಂಡೇ ಕಂಡುಬಂತು. ಸೂರ್ಯೋದಯಕ್ಕೂ ಮುನ್ನ ಶುರುವಾದ ಭಕ್ತರ ಸರದಿ ಸೂರ್ಯಾಸ್ತ ಕಳೆದರೂ ಸಹ ಕಡಿಮೆ ಆಗಿರಲಿಲ್ಲ.
ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯಾಸ್ತ ಕಳೆದರೂ ಕಮ್ಮಿಯಾಗದ ಶಿವಭಕ್ತರ ದಂಡು - ಶಿವರಾತ್ರಿಯ ವಿಶೇಷ ಪೂಜೆಯಲ್ಲಿ ಭಾಗಿ ಆದ ಜನ
ಗವಿಗಂಗಾಧರೇಶ್ವರ ದೇವಸ್ಥಾನ ಎರಡು ಕಾರಣಕ್ಕೆ ಬಹಳ ವಿಶೇಷವಾಗಿದೆ. ಒಂದು ಸಂಕ್ರಾಂತಿ ಸಮಯದಲ್ಲಿ ಸೂರ್ಯನೇ ಶಿವನ ಪೂಜೆ ಮಾಡುವುದು, ಇನ್ನೊಂದು ದಕ್ಷಿಣಾಭಿಮುಖವಾಗಿರುವ ಶಿವಲಿಂಗ, ಇದು ಬಹಳ ಅಪರೂಪ.
![ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯಾಸ್ತ ಕಳೆದರೂ ಕಮ್ಮಿಯಾಗದ ಶಿವಭಕ್ತರ ದಂಡು gavi-gangadhareshwara](https://etvbharatimages.akamaized.net/etvbharat/prod-images/768-512-14606513-thumbnail-3x2-shiva.jpg)
ಸೋಮಸುಂದರ ದೀಕ್ಷಿತರು ಸೋಮಸುಂದರ ದೀಕ್ಷಿತರು
ಗವಿಗಂಗಾದೇಶ್ವರನಿಗೆ ಮುಂಜಾನೆ ವಿಶೇಷ ಪೂಜೆ ಸಲ್ಲಿಕೆ ನಂತರ ನಿರಂತರ ಅಭಿಷೇಕಗಳು ನಡೆದವು. ಶಿವರಾತ್ರಿ ಸಮಯದಲ್ಲಿ ಶಿವ ಮಂತ್ರ ಪಠಿಸುವುದು, ಜಾಗರಣೆ, ಉಪವಾಸ ಮಾಡಿದರೆ ವರ್ಷದ ಇಡೀ 364 ದಿನಗಳ ಪುಣ್ಯ ಈ ಒಂದೇ ದಿನದಲ್ಲಿ ಸಿಗುತ್ತೆ ಅನ್ನೋದು ನಂಬಿಕೆ. ಹೀಗಾಗಿ ಈ ದಿನದಂದು ವಿಶೇಷ ಪೂಜೆ ಪುನಸ್ಕಾರ ನಡೆಯುತ್ತೆ ಎಂದು ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಈಟಿವಿ ಭಾರತ್‌ಗೆ ಧಾರ್ಮಿಕ ಮಹತ್ವವನ್ನು ವಿವರಿಸಿದರು.
ಇದನ್ನೂ ಓದಿ:ಚಿಕ್ಕಮಗಳೂರು.. ತಪಸ್ವಿ ಸೃಷ್ಟಿಸಿದ 1000 ಬಿಲ್ವಪತ್ರೆಯ ವನ
TAGGED:
shivarathri special worship