ಬೆಂಗಳೂರು: ಅನಾಥಾಶ್ರಮದ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡಿ, ಜನರು ದಾನ ಮಾಡಿದ ಬಟ್ಟೆ ಬರೆಗಳನ್ನು ಕಸಕ್ಕೆ ಎಸೆಯುತ್ತಿದ್ದ ಖದೀಮನಿಗೆ ಮಾರ್ಷಲ್‌ಗಳು ದಂಡ ವಿಧಿಸಿದ್ದಾರೆ.
ಸಾಮಾನ್ಯವಾಗಿ ಮನೆಗಳಲ್ಲಿ ಹಳೆ ಬಟ್ಟೆಗಳು, ಬಳಸದೇ ಇರುವ ವಸ್ತುಗಳು, ಹೀಗೆ ಉಪಯೋಗಿಸದೇ ಇರುವ ವಸ್ತುಗಳನ್ನು ಜನರು ಅನಾಥಾಶ್ರಮಕ್ಕೆ ಹೋಗಿ ದಾನ ಮಾಡ್ತಿದ್ರು. ಇತ್ತೀಚಿನ ದಿನಗಳಲ್ಲಿ ಜನರಿಗೆ ಕೆಲಸದ ಒತ್ತಡದ, ಸಮಯದ ಅಭಾವದಿಂದಾಗಿ ಅನಾಥಾಶ್ರಮಕ್ಕೆ ಹೋಗಲು ಆಗದ ಕಾರಣ, ಕೆಲ ಆಶ್ರಮದವರು ಮನೆ ಮನೆಗೆ ಹೋಗಿ ಉಪಯೋಗಿಸದ ವಸ್ತುಗಳನ್ನು ಕೇಳಿ ಪಡೆಯುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ ಅನಾಥಾಶ್ರಮದ ಹೆಸರು ಹೇಳಿಕೊಂಡು ಹಣ ಮಾಡಲು ಹೊರಟಿದ್ದಾನೆ.
ಅನಾಥಾಶ್ರಮದ ಹೆಸರಿನಲ್ಲಿ ಅಕ್ರಮ ಇಲ್ಲೊಬ್ಬ ಭೂಪ ಆಶ್ರಮದ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡಿ, ದಾನ ಮಾಡಿದ ಬಟ್ಟೆ ಬರೆಗಳನ್ನು ಕಸಕ್ಕೆ ಎಸೆಯುತ್ತಿದ್ದಾನೆ. ಅನಾಥರಿಗಾಗಿ ಜನರು ಕೊಡುವ ಹಣವನ್ನು ಮಾತ್ರ ಜೇಬಿಗೆ ಹಾಕಿಕೊಳ್ಳುತ್ತಾನೆ. ಸ್ನೇಹ ಜ್ಯೋತಿ ಅನಾಥ ಆಶ್ರಮದ ಹೆಸರಿನಲ್ಲಿ ಈ ಅಕ್ರಮ ನಡೆದಿದೆ.
ಇದನ್ನೂ ಓದಿ:ನಾಳೆಯಿಂದ ಎರಡು ದಿನ ಸಿಎಂ ಜಿಲ್ಲಾ ಪ್ರವಾಸ..!
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವಾಗ ಖದೀಮ ಬಿಬಿಎಂಪಿ ಮಾರ್ಷಲ್‌ಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಮಲ್ಲೇಶ್ವರಂ ರೈಲ್ವೆ ನಿಲ್ದಾಣದ ಬಳಿ ಜನರಿಂದ ಆಶ್ರಮದ ಹೆಸರಿನಲ್ಲಿ ಪಡೆದ ಮೂಟೆಗಟ್ಟಲೆ ಬಟ್ಟೆಗಳನ್ನು ಎಸೆದು ಹೋಗುತ್ತಿದ್ದ ಸ್ನೇಹ ಜ್ಯೋತಿ ಹೆಸರಿನ ಆಶ್ರಮದ ಸಿಬ್ಬಂದಿಯನ್ನು ಬಿಬಿಎಂಪಿ ಮಾರ್ಷಲ್‌ಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದಿದ್ದಕ್ಕಾಗಿ ಮಾರ್ಷಲ್‌ಗಳು ಈತನಿಗೆ ಐದು ಸಾವಿರ ರೂಪಾಯಿಗಳ ದಂಡ ಸಹ ವಿಧಿಸಿದ್ದಾರೆ.