ಕರ್ನಾಟಕ

karnataka

ETV Bharat / city

ಪೀಣ್ಯ ಮೇಲ್ಸೇತುವೆ ಮತ್ತೆ ಬಂದ್ : ವಾಹನ ಸವಾರರಿಗೆ ಕಿರಿಕಿರಿ - peenya fly over closed

ಇಂದಿನಿಂದ ಪೀಣ್ಯ ಫ್ಲೈ ಓವರ್‌ ಮೇಲೆ ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

peenya fly over closed again
ಪೀಣ್ಯ ಮೇಲ್ಸೇತುವೆ ಮತ್ತೆ ಬಂದ್

By

Published : Mar 13, 2022, 2:49 PM IST

ಬೆಂಗಳೂರು: ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ, ದುರಸ್ತಿಗಾಗಿ ಎರಡು ತಿಂಗಳುಗಳ ಕಾಲ ಪೀಣ್ಯ ಫ್ಲೈ ಓವರ್‌ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ಮತ್ತೆ ಮಧ್ಯರಾತ್ರಿ 12 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಫ್ಲೈ ಓವರ್​ನ 102 ಮತ್ತು 103 ಪಿಲ್ಲರ್‌ಗಳ ಮಧ್ಯೆ 8ನೇ ಮೈಲಿಯ ಸ್ವಾತಿ ಪೆಟ್ರೋಲ್‌ ಬಂಕ್‌ ಬಳಿ ಅಳವಡಿಸಿರುವ ಕೇಬಲ್‌ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದಾಗಿ ಫೆ.16ರಿಂದ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರೂ ಭಾರಿ ವಾಹನಗಳು ಇದೇ ಸೇತುವೆ ಮೇಲೆ ಚಲಿಸಲು ಯತ್ನಿಸುತ್ತಿದ್ದವು. ಇದರಿಂದಾಗಿ ಭಾರಿ ವಾಹನ ಸಂಚಾರ ನಿಯಂತ್ರಿಸಲು ಅಳವಡಿಸಿದ್ದ ಹೈಟ್‌ ರಿಸ್ಟ್ರಿಕ್ಷನ್‌ ಗ್ಯಾಂಟ್ರಿಗಳು ಬಾಗಿದ್ದು, ಇದೀಗ ರಸ್ತೆಯ ಎರಡೂ ಬದಿಗಳಲ್ಲಿ ರಾತ್ರಿ 12ರಿಂದ ಬೆಳಗ್ಗೆ 5ರವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ:ಭೀಮಾತೀರದ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಪೊಲೀಸ್ ಅಧಿಕಾರಿಗಳು

ಗೊರಗುಂಟೆಪಾಳ್ಯದಿಂದ ಔಟರ್ ರಿಂಗ್ ರೋಡ್ ಬಳಸಿ ನಗರದಿಂದ ಹೊರ ಹೋಗುವುದು ಮತ್ತು ನಗರಕ್ಕೆ ಬರುವ ವಾಹನಗಳು ಮಾದಾವಾರ ಬಳಿ ನೈಸ್ ರಸ್ತೆ ಬಳಸಿಕೊಂಡು ಬರುವಂತೆ ಸೂಚಿಸಲಾಗಿದೆ.

ABOUT THE AUTHOR

...view details