ಬೆಂಗಳೂರು: ಸಾಮಾನ್ಯವಾಗಿ ಇಷ್ಟು ದಿನ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಮಾತ್ರ ದಂಡ ಬೀಳುತಿತ್ತು. ಆದರೆ ಇನ್ಮುಂದೆ ಎಲ್ಲೆಂದರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ದಂಡ ಬೀಳಲಿದೆ ಎಂಬ ಮಾಹಿತಿ ಸಿಕ್ಕಿದೆ.
ಇನ್ಮುಂದೆ ನಿಯಮ ಉಲ್ಲಂಘಿಸುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಚಿಂತನೆ ನಡೆಸಿದ್ದಾರೆ. ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಶೀಘ್ರದಲ್ಲೇ ಈ ರೂಲ್ಸ್ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ.
ಕಳೆದ ವರ್ಷ ಝೀಬ್ರಾ ಕ್ರಾಸ್ ಬಿಟ್ಟು ಬೇರೆಡೆ ರಸ್ತೆ ದಾಟುತ್ತಿದ್ದ 69 ಮಂದಿ ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಬಲಿಯಾಗಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದರಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೂ ಫೈನ್ ಹಾಕಲು ಯೋಜನೆ ರೆಡಿ ಮಾಡಿದ್ದಾರೆ. ಆದರೆ ಬೆಂಗಳೂರು ನಗರದ ಎಷ್ಟೋ ರಸ್ತೆಗಳಲ್ಲಿ ಸರಿಯಾದ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಇಲ್ಲ. ಪಾದಚಾರಿ ಮಾರ್ಗಗಳು ಸರಿಯಾಗಿಲ್ಲ. ಹೀಗಿರುವಾಗ ಪಾದಚಾರಿಗಳಿಗೆ ಫೈನ್ ಹಾಕುವ ಕಾರ್ಯ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದು ಪ್ರಶ್ನೆಯಾಗಿದೆ.