ಕರ್ನಾಟಕ

karnataka

ETV Bharat / city

ಬಿಎಂಟಿಸಿ ಬಸ್ ಹರಿದು ಪಾದಚಾರಿ ಸಾವು - ಪಾದಚಾರಿ ಮೇಲೆ ಹರಿದ ಬಿಎಂಟಿಸಿ ಬಸ್

ಮೆಜೆಸ್ಟಿಕ್‌ ಬಿಎಂಟಿಸಿ ಬಸ್‌ ನಿಲ್ದಾಣದ ನಿರ್ಗಮನ ಗೇಟ್‌ ಬಳಿ ಬಸ್‌ ಹರಿದು ಪಿ.ಕೃಷ್ಣಮೂರ್ತಿ ಎಂಬವರು ಮೃತಪಟ್ಟಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BMTC bus accident
ವ್ಯಕ್ತಿ ಮೇಲೆ ಹರಿದ ಬಿಎಂಟಿಸಿ ಬಸ್

By

Published : Dec 27, 2021, 6:37 AM IST

ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಬಿಎಂಟಿಸಿ ಬಸ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ 3.30ರಲ್ಲಿ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಮೂರನೇ ರಿಂಗ್ ಎಕ್ಸಿಟ್‌ಗೇಟ್ ಬಳಿ ಪಿ.ಕೃಷ್ಣಮೂರ್ತಿ ನಡೆದುಕೊಂಡು ಹೋಗುತ್ತಿದ್ದರು. ಬಸ್ ನಿಲ್ದಾಣದ ಒಳಭಾಗದಿಂದ ಅತಿ ವೇಗವಾಗಿ ಬಂದ ಬಸ್ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರು ಕೆಳಗೆ ಬಿದ್ದಿದ್ದು, ಬಸ್​ನ ಹಿಂಭಾಗದ ಚಕ್ರ ತಲೆ ಮೇಲೆ ಹರಿದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವ್ಯಕ್ತಿ ಮೇಲೆ ಹರಿದ ಬಿಎಂಟಿಸಿ ಬಸ್

ನಗರ ಪಶ್ಚಿಮ ವಿಭಾಗದ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details