ಬೆಂಗಳೂರು: ಟ್ರೈನ್ ಬರುತ್ತಿರುವ ವೇಳೆ ರೈಲು ಹಳಿ ದಾಟಲು ಯತ್ನಿಸಿದ ಪ್ರಯಾಣಿಕರ ಗುಂಪೊಂದು ಕೂದಲೆಳೆ ಅಂತರದಲ್ಲಿ ಪಾರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ಗಮನಿಸಿದಾಗ, ಈಗಾಗಲೇ ಹಳಿ ಮೇಲೆ ನಿಂತಿರುವ ಒಂದು ರೈಲಿನಿಂದ ಇಳಿದ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಸಾಕಷ್ಟು ಲಗೇಜ್ ಬ್ಯಾಗ್ ಹಿಡಿದುಕೊಂಡು ಮತ್ತೊಂದು ಹಳಿ ದಾಟಲು ಪ್ರಯತ್ನಿಸುತ್ತಿರುತ್ತಾರೆ. ರೈಲು ಬರುತ್ತಿರುವುದನ್ನ ಗಮನಿಸಿದ ಒಂದಷ್ಟು ಮಂದಿ ಕೂಡಲೇ ಲಗೇಜ್ ಸಮೇತ ಮುಂದೆ ಓಡಿಹೋಗಿದ್ದಾರೆ. ಲಗೇಜ್ ಬ್ಯಾಗ್ ಅನ್ನು ಹಳಿಯ ಮತ್ತೊಂದು ಬದಿಗೆ ಸಾಗಿಸಿದ ಮಹಿಳೆ ಮತ್ತೊಂದು ಲಗೇಜ್ ಹಾಗೂ ತನ್ನ ಪೋಷಕರನ್ನು ಕರೆತರಲು ಮತ್ತೆ ವಾಪಸ್ ಬಂದಿದ್ದಾರೆ.