ಕರ್ನಾಟಕ

karnataka

ETV Bharat / city

ಮೇಕೆದಾಟು ವಿಚಾರವಾಗಿ ಕೇಂದ್ರ ನೀರಾವರಿ ಸಚಿವರು ರಾಜ್ಯಕ್ಕೆ ಬಂದಿಲ್ಲ: HDK ಅಸಮಾಧಾನ - ಕೇಂದ್ರ ನೀರಾವರಿ ಸಚಿವ

ರಾಜ್ಯಕ್ಕೆ ಕೇಂದ್ರ ನೀರಾವರಿ ಸಚಿವರು ಬಂದಿದ್ದು ರಾಜ್ಯದಲ್ಲಿ ಆಗುತ್ತಿರುವ ನೀರಾವರಿ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಅಲ್ಲ. ಕೇಂದ್ರದ ಜಲ ಮಿಷನ್ ಯೋಜನೆ ರಾಜ್ಯದಲ್ಲಿ ಯಾವ ರೀತಿ ಅನುಷ್ಠಾನಕ್ಕೆ ಬಂದಿದೆ ಎಂಬುದನ್ನ ನೋಡಲು ಬಂದಿದ್ದಾರೆ. ಮೇಕೆದಾಟು ವಿಚಾರವಾಗಲಿ ಅಥವಾ ನೀರಾವರಿ ಯೋಜನೆಗಳ ಬಗ್ಗೆ ಅವರಿಗೆ ಆಸಕ್ತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

party-workers-have-ability-to-make-win
ಕುಮಾರಸ್ವಾಮಿ

By

Published : Jul 17, 2021, 3:48 PM IST

ಬೆಂಗಳೂರು: ರಾಜ್ಯಕ್ಕೆ ಕೇಂದ್ರ ನೀರಾವರಿ ಸಚಿವರು ಬಂದಿದ್ದು, ರಾಜ್ಯದಲ್ಲಿ ಆಗುತ್ತಿರುವ ನೀರಾವರಿ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಅಲ್ಲ. ಕೇಂದ್ರದ ಜಲ ಮಿಷನ್ ಯೋಜನೆ ರಾಜ್ಯದಲ್ಲಿ ಯಾವ ರೀತಿ ಅನುಷ್ಠಾನಕ್ಕೆ ಬಂದಿದೆ ಎಂಬುವುದನ್ನ ನೋಡಲು ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಜಿಲ್ಲಾವಾರು ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ನೀರಾವರಿ ಸಚಿವರು ಬಂದಿದ್ದು ರಾಜ್ಯದಲ್ಲಿ ಆಗುತ್ತಿರುವ ನೀರಾವರಿ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಅಲ್ಲ. ಕೇಂದ್ರದ ಜಲ ಮಿಷನ್ ಯೋಜನೆ ರಾಜ್ಯದಲ್ಲಿ ಯಾವ ರೀತಿ ಅನುಷ್ಠಾನಕ್ಕೆ ಬಂದಿದೆ ಎಂಬುವುದನ್ನ ನೋಡಲು ಬಂದಿದ್ದಾರೆ. ಮೇಕೆದಾಟು ವಿಚಾರವಾಗಲಿ ಅಥವಾ ನೀರಾವರಿ ಯೋಜನೆಗಳ ಬಗ್ಗೆ ಅವರಿಗೆ ಆಸಕ್ತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೇಕೆದಾಟು ವಿಚಾರವಾಗಿ ಕೇಂದ್ರ ನೀರಾವರಿ ಸಚಿವರು ರಾಜ್ಯಕ್ಕೆ ಬಂದಿಲ್ಲ

ಮೇಕೆದಾಟು ಜಾರಿಯಾಗಲ್ಲ

ತಮಿಳುನಾಡಿನ ಸಚಿವರು ಅವರನ್ನ ದೆಹಲಿಯಲ್ಲಿ ಭೇಟಿ ಮಾಡಿದಾಗ ಮೇಕೆದಾಟು ಯೋಜನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯಕ್ಕೆ ಮೇಕೆದಾಟು ಯೋಜನೆ ಜಾರಿಯಾಗಲ್ಲ ಬಿಡಿ ಎಂದು ಕೇಂದ್ರ ಸಚಿವರು ತಮಿಳುನಾಡಿನ ಸಚಿವರಿಗೆ ಆಶ್ವಾಸನೆ ಕೊಟ್ಟಿದ್ದಾರೆ. ಇದು ರಾಜ್ಯದ ಜನರ ಭಾವನೆಗೆ ದಕ್ಕೆ ಆಗುವಂತ ವಿಚಾರ ಎಂದರು.

ಸೆಮಿ ಫೈನಲ್ ಗೆದ್ರೆ ಫೈನಲ್ ಸುಲಭ

ಆರಂಭಿಕ ಹಂತದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಬೇಕಾಗಿದೆ. ಇದೊಂದು ರೀತಿಯ ಸೆಮಿ ಫೈನಲ್ ಇದ್ದ ಹಾಗೆ. ಇದನ್ನು ಗೆದ್ದರೆ ಫೈನಲ್ (ವಿಧಾನಸಭೆ ಚುನಾವಣೆ)ನಲ್ಲಿ ಸುಲಭವಾಗಿ ಗೆಲ್ಲಬಹುದು. ಅದಕ್ಕಾಗಿ ಸೆಮಿ ಫೈನಲ್​ನಲ್ಲಿ ಹೆಚ್ಚಿನ ರೀತಿ ಹೋರಾಟ ಮಾಡಬೇಕಿದೆ. ಈ ಹುಮ್ಮಸ್ಸು ಕಾರ್ಯಕರ್ತರಲ್ಲೇ ಇದೆ. ಅವರು ಸಂಪೂರ್ಣವಾಗಿ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ. ನಮಗೆ ವಿಸಿಟಿಂಗ್ ಪದಾಧಿಕಾರಿಗಳು ಬೇಡ. ಜನರ ಮಧ್ಯೆ ಹೋಗಿ ಸಮಸ್ಯೆ ಆಲಿಸುವಂತಹ ಕಾರ್ಯಕರ್ತರು ಬೇಕಾಗಿದ್ದಾರೆ ಎಂದು ಹೇಳಿದರು.

ಐದು ಕಾರ್ಯಕ್ರಮ ವಿಸನ್​​

ಈಗಾಗಲೇ ಐದು ಕಾರ್ಯಕ್ರಮಗಳ ಬಗ್ಗೆ ನನ್ನದೇ ಆದ ವಿಸನ್ ಇಟ್ಟುಕೊಂಡಿದ್ದೇನೆ. ಅವೆಲ್ಲವನ್ನೂ ಅವರಿಗೆ ತಿಳಿಸಿದ್ದೇನೆ. ಆಂದೋಲನದ ರೀತಿ ಮನೆ ಮನೆಗೆ ತಲುಪಬೇಕಾಗಿದೆ. ಬಿಬಿಎಂಪಿ ಚುನಾವಣೆ ಕೂಡ ನಮಗೆ ಮುಖ್ಯವಾಗಿದೆ. ಹೆಚ್ಚಿನ ರೀತಿಯಲ್ಲಿ ಪ್ರಾದೇಶಿಕ ನೆಲಗಟ್ಟು ಇಟ್ಟುಕೊಂಡು ಹೋಗಬೇಕಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಜೆಡಿಎಸ್​ಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರ ಆಗಮನ: ಯುವಕರು, ಅದರಲ್ಲೂ ವಕೀಲ ವೃತ್ತಿ ಮಾಡುತ್ತಿರುವವರು ಪಕ್ಷಕ್ಕೆ ಹೆಚ್ಚಾಗಿ ಬರುತ್ತಿದ್ದಾರೆ. ಉತ್ತಮ ರೀತಿಯ ಬೆಳವಣಿಗೆ ಕಾಣುತ್ತಿದ್ದೇನೆ. ಹೊರ ನೋಟಕ್ಕೆ ಬಿಜೆಪಿಯವರು ಜೆಡಿಎಸ್ ಮುಗಿದೇ ಹೋಯ್ತು ಅಂತಾರೆ. ಮೈತ್ರಿ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೆ ಬಂದಿದ್ದಾರೆ. ಉಪ ಚುನಾಚಣೆ ಫಲಿತಾಂಶ ಇಟ್ಟುಕೊಂಡು ಈ ರೀತಿ ಮಾತನಾಡುತ್ತಿದ್ದಾರೆ. ಆದರೆ, ನಿಷ್ಠಾವಂತ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಮೇಕೆದಾಟು ವಿಚಾರವಾಗಿ ಕೇಂದ್ರ ನೀರಾವರಿ ಸಚಿವರ ರಾಜ್ಯಕ್ಕೆ ಬಂದಿಲ್ಲ

ರಾಜ್ಯಕ್ಕೆ ಕೇಂದ್ರ ನೀರಾವರಿ ಸಚಿವರು ಬಂದಿದ್ದು ರಾಜ್ಯದಲ್ಲಿ ಆಗುತ್ತಿರುವ ನೀರಾವರಿ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಅಲ್ಲ. ಕೇಂದ್ರದ ಜಲ ಮಿಷನ್ ಯೋಜನೆ ರಾಜ್ಯದಲ್ಲಿ ಯಾವ ರೀತಿ ಅನುಷ್ಠಾನಕ್ಕೆ ಬಂದಿದೆ ಎಂಬುವುದನ್ನ ನೋಡಲು ಬಂದಿದ್ದಾರೆ. ಮೇಕೆದಾಟು ವಿಚಾರವಾಗಲಿ ಅಥವಾ ನೀರಾವರಿ ಯೋಜನೆಗಳ ಬಗ್ಗೆ ಅವರಿಗೆ ಆಸಕ್ತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details