ಕರ್ನಾಟಕ

karnataka

ETV Bharat / city

ಗಣಿ, ಖನಿಜಗಳ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರ ನಿರಾಣಿ ಸ್ವಾಗತ - Parliament pass mines and minerals amendment bill

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಅಂಗೀಕಾರಕ್ಕೆ ವಿಶೇಷ ಆಸಕ್ತಿ ವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರುಗಳಿಗೆ ಪತ್ರಿಕಾ ಹೇಳಿಕೆ ಮೂಲಕ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

NIRANI
ಮುರುಗೇಶ್ ನಿರಾಣಿ

By

Published : Mar 25, 2021, 9:59 PM IST

Updated : Oct 10, 2022, 1:22 PM IST

ಬೆಂಗಳೂರು: ಸಂಸತ್ತಿನ ಉಭಯ ಸದನಗಳಲ್ಲಿ ಮಂಡನೆಯಾದ 'ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ' ಅಂಗೀಕಾರವಾಗಿರುವುದನ್ನು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್. ನಿರಾಣಿ ಸ್ವಾಗತಿಸಿದ್ದಾರೆ.

ಈ ಕಾಯ್ದೆ ಅಂಗೀಕಾರಕ್ಕೆ ವಿಶೇಷ ಆಸಕ್ತಿ ವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರುಗಳಿಗೆ ಪತ್ರಿಕಾ ಹೇಳಿಕೆ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ವ್ಯಾಪಾರ ಮಾಡುವ ಸುಲಭತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ತಿದ್ದುಪಡಿ ತಂದಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆಯಾಗಿದೆ. ಖನಿಜ ಕ್ಷೇತ್ರದಲ್ಲಿ ನೀತಿ ಸುಧಾರಣೆಗಳು ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಗಣಿಗಾರಿಕೆ ಕೃಷಿಯ ನಂತರದ ಸ್ಥಾನದಲ್ಲಿದ್ದು, ಖನಿಜ ಸಮೃದ್ಧ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಇದು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಂಪ್ರದಾಯಿಕವಾಗಿ ಗಣಿಗಾರಿಕೆಯಲ್ಲಿ ಶೇ.1 ಬೆಳವಣಿಗೆಯು ಕೈಗಾರಿಕಾ ಉತ್ಪಾದನೆಯ ಬೆಳವಣಿಗೆಯ ದರದಲ್ಲಿ ಶೇ.1.2-1.4 ಹೆಚ್ಚಳಕ್ಕೆ ಕಾರಣವಾಗಿ, ನೇರ ಉದ್ಯೋಗವು 10 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ದೇಶದ ಜಿಡಿಪಿಯಲ್ಲಿ ಖನಿಜ ಕ್ಷೇತ್ರದ ಕೊಡುಗೆ ತುಂಬಾ ಕಡಿಮೆಯಾಗಿದ್ದು, (ಜಿಡಿಪಿಯ ಶೇ.1.75) ನಮ್ಮ ರಾಷ್ಟ್ರೀಯ ಖನಿಜ ನೀತಿ 7 ವರ್ಷಗಳಲ್ಲಿ ಖನಿಜಗಳ ಉತ್ಪಾದನೆಯನ್ನು ಶೇ.200 ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.

ಇದನ್ನೂ ಓದಿ:ಸಂತ್ರಸ್ತ ಯುವತಿಗೆ ರಕ್ಷಣೆ ನೀಡುವುದು ಸರ್ಕಾರದ ಮೂಲಭೂತ ಕರ್ತವ್ಯ: ಡಿಕೆಶಿ

ಭವಿಷ್ಯದಲ್ಲಿ ಇಂತಹ ಸನ್ನಿವೇಶಗಳನ್ನು ತಪ್ಪಿಸುವ ಸಲುವಾಗಿ, ಕಾಯ್ದೆಯ ಸೆಕ್ಷನ್ 8 ಬಿ ಅಡಿಯಲ್ಲಿ ಅನುಮತಿಗಳು ಇತ್ಯಾದಿಗಳನ್ನು ವರ್ಗಾವಣೆ ಮಾಡುವ ಸೌಲಭ್ಯವನ್ನು ವಿಸ್ತರಿಸಿದರೆ, ಹರಾಜು ಮಾಡಿದ ಗಣಿಗಳಿಂದ ಉತ್ಪಾದನೆಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

Last Updated : Oct 10, 2022, 1:22 PM IST

For All Latest Updates

TAGGED:

ABOUT THE AUTHOR

...view details