ದೇವನಹಳ್ಳಿ:ಉಕ್ರೇನ್ನ ಯುದ್ಧ ಭೂಮಿಯಿಂದ ತವರಿಗೆ ಬಂದಿಳಿದ ಕರುನಾಡಿನ ವಿದ್ಯಾರ್ಥಿಗಳಿಗೆ ಪೋಷಕರು ತಿರುಪತಿ ಲಡ್ಡು, ಮಂತ್ರಾಲಯದ ಸಿಹಿ ತಿನ್ನಿಸಿ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಉಕ್ರೇನ್ನಿಂದ ತವರಿಗೆ ವಾಪಸ್ಸಾಗುತ್ತೇವೆ ಎಂಬ ವಿಶ್ವಾಸ ಇರಲಿಲ್ಲ. ಅಕ್ಕಪಕ್ಕದಲ್ಲೇ ಬಾಂಬ್, ಶೆಲ್ಗಳ ಶಬ್ದ ಕಿವಿಗೆ ಬಡಿಯುತ್ತಿತ್ತು. ನಾವು 3 ಜನ ಝಪೊರಿಝಿಯಾ ವಿಶ್ವವಿದ್ಯಾಲಯದಲ್ಲಿ ಮಡಿಕಲ್ ವ್ಯಾಸಂಗ ಮಾಡ್ತಿದ್ವಿ. ರಷ್ಯಾ ಯುದ್ಧ ಘೋಷಿಸಿದ್ದರಿಂದ ತಾಯ್ನಾಡಿಗೆ ಬರುವ ಭರವಸೆಗೆ ಕೇಂದ್ರ ಸರ್ಕಾರ ಮತ್ತು ಭಾರತ ರಾಯಭಾರ ಕಚೇರಿ ಬೆಂಬಲ ನೀಡಿದೆ ಎಂದು ಹೇಳಿದರು.