ಬೆಂಗಳೂರು: ದಿನದಿಂದ ದಿನಕ್ಕೆ ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರ ನಡುವೆ ಹಗ್ಗ - ಜಗ್ಗಾಟ ಹೆಚ್ಚುತಲ್ಲೇ ಇದ್ದು, ಇಂದು ಲಗ್ಗೆರೆ ಬಳಿ ಇರುವ ನಾರಾಯಣ್ ಇ-ಟೆಕ್ನೊ ಶಾಲೆಯ ವಿರುದ್ದ ಪೋಷಕರ ಪ್ರತಿಭಟನೆ ನಡೆಸಿದರು.
ತಾರಕಕ್ಕೇರಿದ ಶಾಲಾ ಫೀಸ್ ಫೈಟ್: ಇಲ್ಲಿಯವರೆಗೂ 1 ಲಕ್ಷದವರೆಗೂ ಎಸ್ಎಸ್ಎಲ್ಸಿ ಮಕ್ಕಳಿಗೆ ಶುಲ್ಕ ಕಟ್ಟುತ್ತಿದ್ದೇವೆ. ಶುಲ್ಕ ಕಡಿತ ಮಾಡಿ ಅಂತ ಕೇಳಿದ್ರೆ ಇನ್ನೂ ಮಾಡಿಲ್ಲ ಎಂದು ಬೆಂಗಳೂರು ಉತ್ತರ ವಲಯದ ಬಿಇಒ ರಮೇಶ್ಗೆ ಪೋಷಕರು ದೂರು ನೀಡಿದ್ದರು. ಆ ಸಂದರ್ಭದಲ್ಲಿ ಬಿಇಒ ರಮೇಶ್ ಶಾಲೆಗೆ ಬರ್ತೀನಿ ಅಲ್ಲೇ ಮಾತಾಡೋಣ ಅಂದಿದ್ದರು. ಆದ್ರೇ ಬಿಇಒ ನಿನ್ನೆಯೂ ಬಂದಿಲ್ಲ, ಇವತ್ತೂ ಬಾರದ ಹಿನ್ನೆಲೆ ಬೇಸತ್ತ ಪೋಷಕರು ಪ್ರತಿಭಟನೆ ಮೊರೆ ಹೋಗಿದ್ದಾರೆ.
ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಕೆಂಡಾ ಮಂಡಲವಾಗಿದ್ದಾರೆ. ಶಾಲಾ ಸಿಬ್ಬಂದಿ ಶಾಲೆಯ ಒಳಗೆ ಬಿಡದ ಹಿನ್ನೆಲೆ, ಗೇಟ್ ತಳ್ಳಿ ಒಳಗೆ ನುಗ್ಗಲು ವಿದ್ಯಾರ್ಥಿಗಳ ಪೋಷಕರು ಯತ್ನಿಸಿದರು. ಶಾಲಾ ಸಿಬ್ಬಂದಿ ಗೇಟ್ ಕ್ಲೋಸ್ ಮಾಡಿ, ಒಳಗೆ ಬಾರದಂತೆ ಪೋಷಕರನ್ನ ತಡೆದಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಡೆಲ್ಟಾ+ ವೈರಸ್ ಟೆನ್ಷನ್
10ನೇ ತರಗತಿ ವಾರ್ಷಿಕ ಪರೀಕ್ಷೆಗೆ ಡೆಲ್ಟಾ+ ವೈರಸ್ ಆತಂಕ ಶುರುವಾಗಿದೆ. ಗೈಡ್ಲೈನ್ಸ್ ಬಿಡುಗಡೆ ಬೆನ್ನಲ್ಲೇ ಟೆನ್ಷನ್ ಹೆಚ್ಚಾಗಿದೆ. ಪೋಷಕರು, ಆರ್ಟಿಇ ಕಾರ್ಯಕರ್ತರಲ್ಲಿ ಆತಂಕ ಹೆಚ್ಚಾಗುತ್ತಿದೆ. ಶಿಕ್ಷಣ ಸಚಿವರ ಮೆದುಳು ನಿಷ್ಕ್ರಿಯವಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಮೇಲೆ ಪೋಷಕರು ಕಿಡಿ ಕಾರುತ್ತಿದ್ದಾರೆ.
10ನೇ ತರಗತಿ ಪರೀಕ್ಷೆಗೆ ಡೆಲ್ಟಾ+ ವೈರಸ್ ಟೆನ್ಷನ್ ಶಿಕ್ಷಣ ಸಚಿವರು ಯಾವುದೇ ಮುಂದಾಲೋಚನೆ ಇಲ್ಲದೇ ಪರೀಕ್ಷೆ ನಡೆಸಲು ಸಜ್ಜಾಗಿದ್ದಾರೆ. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದು ಎಷ್ಟು ಸರಿ ಎಂದು ಪೋಷಕರು ಸಚಿವರ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವೊಂದಿಷ್ಟು ಪೋಷಕರು ಪರೀಕ್ಷೆ ನಡೆಸಲು ಸಮ್ಮತಿ ನೀಡುತ್ತಿಲ್ಲ. ಒಂದಾದ ಮೇಲೆ ಒಂದು ವೈರಸ್ಗಳಿಂದ ಶೈಕ್ಚಣಿಕ ಚಟುವಟಿಕೆಗೆ ಹೊಡೆತ ಬಿದ್ದಿದೆ. ಮಕ್ಕಳಲ್ಲಿ ಕೂಡ ಆತಂಕ ಶುರುವಾಗಿದೆ. ಪರೀಕ್ಷೆ ಗೊಂದಲ ಗೂಡಾಗಿ ಕಾಡುತ್ತಿದೆ. ಶಿಕ್ಷಣ ಸಚಿವರು ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸುವುದಾಗಿ ಹೇಳಿಕೆ ನೀಡಿದ್ದು, ಹೇಳಿದಂತೆ ಪರೀಕ್ಷೆ ನಡೆಸುತ್ತಾರಾ? ಇಲ್ಲ ಬದಲಾವಣೆಯಾಗುತ್ತಾ? ಎಂಬ ಗೊಂದಲ ಮತ್ತೆ ಪೋಷಕರಲ್ಲಿ ಪ್ರಾರಂಭವಾಗಿದೆ.