ಬೆಂಗಳೂರು: ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಪೋಷಕರ ಸಮನ್ವಯ ಸಮಿತಿ ಸಿಎಂ ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ, ಖಾಸಗಿ ಶಾಲೆ ಶುಲ್ಕ ಕಡಿಮೆ ಮಾಡುವಂತೆ ಮನವಿಪತ್ರ ಸಲ್ಲಿಸಿದ್ದಾರೆ.
ಶಾಲಾ ಶುಲ್ಕ ವಿಚಾರ: ಸಿಎಂ ಭೇಟಿ ಮಾಡಿದ ಪೋಷಕರ ಸಮನ್ವಯ ಸಮಿತಿ - bangalore news
ಕೋವಿಡ್‌ನಿಂದಾಗಿ ಎಲ್ಲ ಕೆಲಸ ಸ್ಥಗಿತವಾದ ಹಿನ್ನೆಲೆ ಈ ವರ್ಷವೂ ಪೋಷಕರು ಕಷ್ಟದಲ್ಲಿ ಇದ್ದಾರೆ. ಖಾಸಗಿ ಶಾಲೆಗಳು ಪೋಷಕರಿಗೆ ಕಿರುಕುಳ ಕೊಡಬಾರದು ಎಂದು ಮನವಿ ಮಾಡಿಕೊಳ್ಳಲಾಗಿದೆ.
Parents Coordination Committee meet CM on School Fees
ಕಳೆದ ವರ್ಷ ಬೋಧನಾ ಶುಲ್ಕದ ಶೇ70ರಷ್ಟು ಸರ್ಕಾರ ನಿಗದಿ ಮಾಡಿತ್ತು. ಈ ವರ್ಷವೂ ಕೂಡ ಶೇ70ರಷ್ಟು ಶಾಲಾ ಶುಲ್ಕ ಕಡಿಮೆಗೊಳಿಸಿ ಆಧಿಕೃತ ಆದೇಶ ಹೊರಡಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.
ಕೋವಿಡ್‌ನಿಂದಾಗಿ ಎಲ್ಲ ಕೆಲಸ ಸ್ಥಗಿತವಾದ ಹಿನ್ನೆಲೆ ಈ ವರ್ಷವೂ ಪೋಷಕರು ಕಷ್ಟದಲ್ಲಿ ಇದ್ದಾರೆ. ಖಾಸಗಿ ಶಾಲೆಗಳು ಪೋಷಕರಿಗೆ ಕಿರುಕುಳ ಕೊಡಬಾರದು. ಆನ್ಲೈನ್ ಕ್ಲಾಸ್, ಪರೀಕ್ಷೆ ಹೆಸರಿನಲ್ಲಿ ದರ್ಪ ಮೆರೆಯದಂತೆ ಖಾಸಗಿ ಶಾಲೆಗೆ ಸೂಚನೆ ನೀಡಬೇಕು ಮತ್ತು ಪ್ರತಿ ಶಾಲೆಯಲ್ಲಿ ಪೋಷಕರು ಹಾಗೂ ಖಾಸಗಿ ಶಾಲೆಗಳ ಸಮಿತಿ ರಚಿಸಿ ಎಂದು ಸಿಎಂ ಬಳಿ ಮನವಿ ಮಾಡಿದ್ದಾರೆ.